ತೆಲಂಗಾಣ | ಶಾಸಕಾಂಗ ಪಕ್ಷದ ಸಭೆ: ಇಂದು ಸಿಎಂ ಆಯ್ಕೆ ಸಾಧ್ಯತೆ

Prasthutha|

ಹೈದರಾಬಾದ್: ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಇಂದು ಸಭೆ ಸೇರಲಿದ್ದು, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

- Advertisement -

ಹಿರಿಯ ನಾಯಕರು ಹಾಗೂ ಎಐಸಿಸಿ ವೀಕ್ಷಕರ ಸಮ್ಮುಖದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. 119 ಸ್ಥಾನಗಳ ವಿಧಾನಸಭೆಯಲ್ಲಿ 64 ಸ್ಥಾನಗಳನ್ನು ಗೆದ್ದ ನಂತರ, ಕಾಂಗ್ರೆಸ್ ನಾಯಕರ ನಿಯೋಗವು ಭಾನುವಾರ ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದೆ.

Join Whatsapp