ತೆಲಂಗಾಣದಲ್ಲಿ ಹಿಂದುತ್ವದ ಮೇಲೆ ಚುನಾವಣೆ: ಯತ್ನಾಳ್

Prasthutha|

ವಿಜಯಪುರ: ತೆಲಂಗಾಣದಲ್ಲಿ ಹಿಂದುತ್ವದ ಮೇಲೆ ಚುನಾವಣೆ ಎದರಿಸುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ರಾಜ್ಯದ ಎಂಟು ವಿಧಾನಸಭೆ ಕ್ಷೇತ್ರಗಳ ಜವಾಬ್ದಾರಿ ನನಗೆ ನೀಡಿದ್ದಾರೆ ಎಂದರು.


ನಾಳೆ ಹೈದ್ರಾಬಾದ್ ನಲ್ಲಿ ಒಂದು ಟ್ರೈನಿಂಗ್ ಆಗುತ್ತದೆ ಎಂದು ಹೇಳಿದ ಯತ್ನಾಳ್, ತೆಲಂಗಾಣದಲ್ಲಿ ಹಿಂದುಗಳ ಪರಿಸ್ಥಿತಿ ದಯನೀಯವಿದೆ. ಈ ಸಲ ತೆಲಂಗಾಣ ಜನ ಬದಲಾವಣೆ ಬಯಸಿದ್ದಾರೆ. ಅಲ್ಲಿ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ, ಅಲ್ಲಿಗೆ ಇವತ್ತು ಹೊರಟಿದ್ದೇನೆ ಎಂದರು.

Join Whatsapp