ಹರೇಕಳ ಗ್ರಾಮ ಪಂಚಾಯತ್ : ಎರಡನೇ ಅವಧಿಗೆ ಕಾಂಗ್ರೆಸ್’ಗೆ ಅಧಿಕಾರ

Prasthutha|

►ಅಧ್ಯಕ್ಷರಾಗಿ ಗುಲಾಬಿ, ಉಪಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಆಯ್ಕೆ

- Advertisement -

ಹರೇಕಳ: ಮಂಗಳೂರು ಉಳ್ಳಾಲ ತಾಲೂಕಿನ ಪ್ರತಿಷ್ಟಿತ ಹರೇಕಳ ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗುಲಾಬಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಮಜೀದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 18 ಸದಸ್ಯ ಬಲದ ಹರೇಕಳ ಗ್ರಾಮ ಪಂಚಾಯತ್ ನಲ್ಲಿ 13 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ಎಸ್ ಡಿಪಿಐ ಬೆಂಬಲಿತ 3 ಸದಸ್ಯರಿದ್ದಾರೆ, 1ಕಮ್ಯುನಿಸ್ಟ್ ಪಕ್ಷ ಬೆಂಬಲಿತ ಹಾಗೂ 1ಪಕ್ಷೇತರ ಸದಸ್ಯರಿದ್ದಾರೆ.

- Advertisement -

ಆಗಸ್ಟ್ 16ರಂದು ಹರೇಕಳ ಗ್ರಾಮ ಸೌಧದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಎರಡನೇ ಅವಧಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರಿದೆ.

Join Whatsapp