ಹೈದರಾಬಾದ್: ಎರಡನೇ ಬಾರಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪ್ರಧಾನಿ ಮೋದಿ ಭೇಟಿಯನ್ನು ತಪ್ಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಕೆಲವೇ ಗಂಟೆಗಳ ಮೊದಲು ಕೆಸಿಆರ್ ಬೆಂಗಳೂರಿಗೆ ತೆರಳಿದರು.
ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಕೆಸಿಆರ್ ಅವರು ಹೈದರಾಬಾದ್ ಗೆ ಭೇಟಿ ನೀಡಿದಾಗ ಮೋದಿ ಅವರನ್ನು ಭೇಟಿಯಾಗುವುದನ್ನು ತಪ್ಪಿಸಿದ್ದಾರೆ.
ಇದಕ್ಕೂ ಮೊದಲು ಫೆಬ್ರವರಿಯಲ್ಲಿ, ಸಂತ ರಾಮಾನುಜಾಚಾರ್ಯರ ದೈತ್ಯ ಪ್ರತಿಮೆಯಾದ ಸಮಾನತೆಯ ಪ್ರತಿಮೆಯನ್ನು ಅನಾವರಣಗೊಳಿಸಲು ಪ್ರಧಾನಮಂತ್ರಿಯವರು ಹೈದರಾಬಾದ್ ಗೆ ಬಂದಿದ್ದರು. ರಾವ್ ಅವರು ‘ಅನಾರೋಗ್ಯದಿಂದ’ ಇದ್ದ ಕಾರಣ ಪ್ರಧಾನಿಯನ್ನು ಸ್ವಾಗತಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿತ್ತು.
ರಾವ್ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಲಿದ್ದು, ರಾಷ್ಟ್ರ ರಾಜಕಾರಣದ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.