ಖಾಸಗಿ ಆಸ್ಪತ್ರೆಗಳಲ್ಲಿ 900 ರೂಪಾಯಿಗಳಿಗೆ ಕೋವಿಡ್ ಲಸಿಕೆ : ಜಾಹೀರಾತು ರೂಪದರ್ಶಿಯಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ !

Prasthutha|

ಮೇ 25 : ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಸುದ್ದಿಗೋಷ್ಟಿ ನಡೆಸಿ ಮುಖಭಂಗಕ್ಕೀಡಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯನ್ನು ರೂ 900ಕ್ಕೆ ಪಡೆಯಿರಿ ಎಂದು ಜಾಹಿರಾತು ನಿಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಜಾಹೀರಾತಿನಲ್ಲಿ ರೂಪದರ್ಶಿಯಾಗಿ ಖುದ್ದು ಸಂಸದ ತೇಜಸ್ವಿ ಸೂರ್ಯ ಅವರೇ ಕಾಣಿಸಿಕೊಂಡಿದ್ದಾರೆ.

- Advertisement -


ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಪ್ರತೀ ಡೋಸಿಗೆ ರೂಪಾಯಿ 900 ರಂತೆ ನೀಡಲಾಗುತ್ತಿದೆ. ಈ ಲಸಿಕೆಗೆ ಸಂಸದ ತೇಜಸ್ವಿ ಸೂರ್ಯ ಜಾಹಿರಾತು ನೀಡಿದ್ದು ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಜನತೆಗೆ ಸರಕಾರ ಉಚಿತವಾಗಿ ಲಸಿಕೆ ನೀಡಲು ವಿಫಲವಾಗಿದೆ. ಆದುದರಿಂದಲೇ ಸಂಸದರು ಹಣ ಪಾವತಿಸಿ ಲಸಿಕೆ ಪಡೆದುಕೊಳ್ಳಿ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.


ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ಜನರು ಮುಂಜಾನೆಯಿಂದ ಮದ್ಯಾಹ್ನದವರೆಗೂ ಕಾದು ಸುಸ್ತಾಗಿ ಲಸಿಕೆ ಇಲ್ಲದೆ ಹಿಂದಿರುಗಿ ವಾಪಸ್ಸಾಗುತ್ತಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿ ಲಸಿಕೆ ದೊರೆಯುತ್ತಿರುವುದಾದರೂ ಹೇಗೆ ಎಂದು ಜಾಲತಾಣಿಗರು ಪ್ರಶ್ನಿಸುತ್ತಿದ್ದಾರೆ.



Join Whatsapp