ನಾಳೆಯಿಂದ ವಾಟ್ಸಪ್, ಫೇಸ್‌ ಬುಕ್‌ ಬಂದ್? ಕಾರಣ ಏನು ಇಲ್ಲಿದೆ ನೋಡಿ!

Prasthutha|

ನವದೆಹಲಿ : ಹೊಸ ಮಧ್ಯಂತರ ಮಾರ್ಗಸೂಚಿಗಳಿಗೆ ಬದ್ಧರಾಗದಿದ್ದಲ್ಲಿ ಜನಪ್ರಿಯ ಸಾಮಾಜಿಕ ಜಾಲತಾಣ ವೇದಿಕೆಗಳಾದ ಫೇಸ್‌ ಬುಕ್‌, ಟ್ವಿಟರ್‌, ಇನ್ಸ್ಟಾಗ್ರಾಮ್‌ ನಾಳೆ(ಮೇ26)ಯಿಂದ ಭಾರತದಲ್ಲಿ ನಿಷೇಧಕ್ಕೊಳಪಡಲಿವೆಯೇ? ಎಂಬ ಪ್ರಶ್ನೆಯೊಂದು ವ್ಯಾಪಕವಾಗಿ ಕೇಳಿಬಂದಿದೆ.

- Advertisement -


ಸಾಮಾಜಿಕ ಜಾಲತಾಣ ವೇದಿಕೆಗಳ ನಿರ್ವಹಣೆಗೆ ಸರಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಮೇ 25ರೊಳಗೆ ಅಂದರೆ ಇಂದಿನೊಳಗೆ ಈ ಮಾರ್ಗಸೂಚಿಗೆ ಬದ್ಧವಾಗುವ ಬಗ್ಗೆ ಪ್ರಕಟಿಸಬೇಕಾಗಿದೆ. ಆದರೆ, ವಾಟ್ಸಪ್‌, ಫೇಸ್‌ ಬುಕ್‌ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣ ವೇದಿಕೆಗಳು ಇಲ್ಲಿವರೆಗೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಟ್ವಿಟರ್‌ ನ ಭಾರತೀಯ ಆವೃತ್ತಿ ಮತ್ತು ಕೂ ಆಪ್‌ ಗಳು ಮಾತ್ರ ಮೇ ೨೫ರೊಳಗೆ ಹೊಸ ಮಾರ್ಗಸೂಚಿಗೆ ಬದ್ಧವಾಗಿರುವ ಬಗ್ಗೆ ಪ್ರಕಟಿಸಿವೆ. ಸರಕಾರದ ಮಾರ್ಗಸೂಚಿಗೆ ಬದ್ಧವಾಗುವ ಗುರಿಹೊಂದಿದ್ದೇವೆ, ಆದರೆ ಕೆಲವು ವಿಷಯಗಳ ಬಗ್ಗೆ ಇನ್ನಷ್ಟು ಚರ್ಚೆ ಬಯಸಿದ್ದೇವೆ ಎಂದು ಫೇಸ್‌ ಬುಕ್‌ ಇಂದು ಪ್ರಕಟಿಸಿದೆ.


ಈ ಹೊಸ ಮಾರ್ಗಸೂಚಿ ಒಟಿಟಿ ವೇದಿಕೆಗಳು ಮತ್ತು ಸುದ್ದಿ ತಾಣಗಳಿಗೂ ಅನ್ವಯವಾಗಲಿದೆ. ಹೊಸ ನಿಯಮಗಳ ಪ್ರಕಾರ, ಕಂಪೆನಿಗಳು ಭಾರತೀಯ ಮೂಲದ ದೂರು ನಿರ್ವಹಣಾಧಿಕಾರಿಯನ್ನು ನೇಮಿಸಬೇಕಿದೆ. ದೂರುಗಳು, ಆಕ್ಷೇಪಾರ್ಹ ಸಂದೇಶಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಬೇಕಿದೆ.

Join Whatsapp