ಗೋವಾ : ತೆಹಲ್ಕಾ ನಿಯತಕಾಲಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ ಪಾಲ್ ಅತ್ಯಾಚಾರ ಪ್ರಕರಣದಲ್ಲಿ ನಿರ್ದೋಷಿ ಎಂದು ಗೋವಾ ನ್ಯಾಯಾಲಯ ಆದೇಶ ಪ್ರಕಟಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ತರುಣ್ ತೇಜ್ ಪಾಲ್ ನಿರ್ದೋಷಿ ಎಂದು 8 ವರ್ಷಗಳ ಬಳಿಕ ಗೋವಾ ಸೆಷನ್ಸ್ ನ್ಯಾಯಾಲಯ ಆದೇಶ ಪ್ರಕಟಿಸಿದೆ. ತರುಣ್ ತೇಜ್ ಪಾಲ್ 2013 ರಲ್ಲಿ ಗೋವಾದ ಪಂಚತಾರಾ ಹೋಟೆಲೊಂದರಲ್ಲಿ ಲಿಫ್ಟ್ ನೊಳಗೆ ತನ್ನ ಸಹದ್ಯೋಗಿಯೊಬ್ಬರಿಗೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ತೀರ್ಪು ನೀಡಿರುವ ಗೋವಾ ಸೆಷನ್ಸ್ ನ್ಯಾಯಾಲಯ ತೇಜ್ ಪಾಲ್ ಅವರು ನಿರ್ದೋಷಿ ಎಂದು ಆದೇಶ ಪ್ರಕಟಿಸಿದೆ.