ಸೂಸೈಡ್ ಪ್ರ್ಯಾಂಕ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕ

Prasthutha|

ಲಕ್ನೋ: ಸೂಸೈಡ್ ಪ್ರ್ಯಾಂಕ್ ಮಾಡಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಜಲೌನ್ನಲ್ಲಿ ನಡೆದಿದೆ.

- Advertisement -

ಒರೈ ಪ್ರದೇಶದ ಕಾನ್ಶಿರಾಮ್ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಜಯೇಶ್ (13) ಸಹೋದರಿಯರೊಂದಿಗೆ ಆತ್ಮಹತ್ಯೆಯ ಆಟವಾಡುತ್ತಿದ್ದ ಸಂದರ್ಭ ಕುತ್ತಿಗೆಗೆ ಹಾಕಿದ್ದ ಕುಣಿಕೆ ಬಿಗಿದು ಸಾವನ್ನಪ್ಪಿದ್ದಾನೆ.

ಕಿರಿಯ ಸಹೋದರಿಯರಾದ ಮಹಾಕ್ ಮತ್ತು ಆಸ್ತಾ ಅವರೊಂದಿಗೆ ಜಯೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಆಟವಾಡುತ್ತಿದ್ದ ಸಂದರ್ಭ, ಆಕಸ್ಮಿಕವಾಗಿ ಕುಣಿಕೆ ಬಿಗಿಯಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

- Advertisement -

ಆಟವಾಡುವ ಸಂದರ್ಭ ಜಯೇಶ್ನ ಕಣ್ಣಿಗೆ ಬಟ್ಟೆ ಕಟ್ಟಿದ್ದು, ಬಳಿಕ ಕುತ್ತಿಗೆಗೆ ಹಗ್ಗವನ್ನು ಹಾಕಿಕೊಂಡಿದ್ದಾನೆ. ನಂತರ ಈ ಹಗ್ಗವನ್ನು ಒಂದು ಕಿಟಕಿಗೆ ಕಟ್ಟಿದ್ದಾನೆ. ಸಣ್ಣ ಟೇಬಲ್ ಮೇಲೆ ಕುಳಿತಿದ್ದ ಬಾಲಕ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಟೇಬಲ್ ತಳ್ಳಿದ್ದರಿಂದ ಕೆಳಗೆ ಬಿದ್ದಿದ್ದಾನೆ. ಇದರ ಪರಿಣಾಮ ಜಯೇಶ್ನ ಕುತ್ತಿಗೆಗೆ ಹಾಕಿದ್ದ ಕುಣಿಕೆ ಬಿಗಿಯಾಗಿ ಸಾವನ್ನಪ್ಪಿದ್ದಾನೆ.

ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರ ಪ್ರಕಾರ ಮಕ್ಕಳ ತಾಯಿ ಸಂಗೀತಾ ಅವರು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದು, ಕಣ್ಣು ಕಾಣಿಸುತ್ತಿದ್ದರೆ ಮಗ ಸಾಯುತ್ತಿರಲಿಲ್ಲ ಎಂದು ಹೇಳಿದ್ದಾರೆ.