ನಟ ಪ್ರಕಾಶ್​ ರಾಜ್​ಗೆ ಜೀವ ಬೆದರಿಕೆ : ಯೂಟ್ಯೂಬ್​ ವಾಹಿನಿ ವಿರುದ್ಧ ಎಫ್​ಐಆರ್​ ದಾಖಲು

Prasthutha|

ಬೆಂಗಳೂರು: ಖ್ಯಾತ ಬಹುಭಾಷಾ ನಟ ಪ್ರಕಾಶ್​ ರಾಜ್​ ಗೆ ಜೀವ ಬೆದರಿಕೆ ಹಾಕಿದ್ದ ಯೂಟ್ಯೂಬ್​ ವಾಹಿನಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.  

- Advertisement -

ಇತ್ತೀಚೆಗೆ ಖ್ಯಾತ ಯೂಟ್ಯೂಬ್​ ವಾಹಿನಿಯಲ್ಲಿ ಪ್ರಕಾಶ್​ ರಾಜ್​ ವಿರುದ್ಧ ಜೀವ ಬೆದರಿಕೆ ಹಾಕುವಂತಹ ವಿಡಿಯೋಗಳನ್ನು ಅಪ್​ಲೋಡ್​ ಮಾಡಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಪ್ರಕಾಶ್​ ರಾಜ್​ ದೂರು ನೀಡಿದ್ದರು. ಈಗ ಆ ಯೂಟ್ಯೂಬ್​ ವಾಹಿನಿ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ.

ಬೆಂಗಳೂರಿನ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 506, 504, 505(2) ಸೆಕ್ಷನ್‌ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ. ಯೂಟ್ಯೂಬ್​ ಚಾನೆಲ್​ನಲ್ಲಿ ಆಗಸ್ಟ್ 14ರಂದು ಜೀವ ಬೆದರಿಕೆ ಹಾಕುವ ಸಂದೇಶದ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಅಪ್ಲೋಡ್ ಮಾಡಿರುವ 2 ವಿಡಿಯೋಗಳಲ್ಲೂ ಬೆದರಿಕೆ ಹಾಕಲಾಗಿದೆ ಎಂದು ಪ್ರಕಾಶ್​ ರಾಜ್​ ಆರೋಪಿಸಿದ್ದಾರೆ.

- Advertisement -

ಪ್ರಕಾಶ್ ರಾಜ್ ಮಾತ್ರವಲ್ಲದೇ ಅವರ ಕುಟುಂಬದವರಿಗೂ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಯೂಟ್ಯೂಬ್​ ವಾಹಿನಿ ವಿರುದ್ಧ ದೂರು ನೀಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಪ್ರಕಾಶ್ ರಾಜ್ ನೀಡಿದ ದೂರಿನ ಅನ್ವಯ ಯೂಟ್ಯೂಬ್ ವಾಹಿ‌ನಿಯ ಮುಖ್ಯಸ್ಥ ಮತ್ತು ಸಿಬ್ಬಂದಿ ವಿರುದ್ಧ ಅಶೋಕ ನಗರ ಠಾಣೆ ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ. ಸದ್ಯ ತನಿಖೆ ಆರಂಭ ಆಗಿದೆ.

Join Whatsapp