ಇ ಕೋರ್ಟ್ ಸೇವೆಯಲ್ಲಿ ತಾಂತ್ರಿಕ ವ್ಯತ್ಯಯ: ತಕ್ಷಣ ಲೋಪ ಸರಿಪಡಿಸಲು ವಕೀಲರ ಸಂಘ ಮನವಿ

Prasthutha|

ಮಂಗಳೂರು: e-couts service ದೇಶದಲ್ಲಿ ನ್ಯಾಯಾಲಯದ ಮಾಹಿತಿ ನೀಡುವ ಅಗತ್ಯ ಡಿಜಿಟಲ್ ಸೇವೆಯಾಗಿದೆ. ಈ ಸೇವೆಯು ಮೊಬೈಲ್ ಅಪ್ಲಿಕೇಶನ್ ಗಳ ಮೂಲಕ ಮತ್ತು ನೇರವಾಗಿ ಇ-ಕೋರ್ಟ್ ವೆಬ್ ಸೈಟ್ ನಿಂದ ಲಭ್ಯವಿದೆ. ಆದರೆ ಇ ಕೋರ್ಟ್ ಸೇವೆಯಲ್ಲಿ ತಾಂತ್ರಿಕ ವ್ಯತ್ಯಯ ಉಂಟಾಗಿದ್ದು, ಇದನ್ನು ತಕ್ಷಣ ಸರಿಪಡಿಸಬೇಕು ಎಂದು ಮಂಗಳೂರು ವಕೀಲರ ಸಂಘ ಮನವಿ ಮಾಡಿದೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ. ಪೃಥ್ವಿರಾಜ್ ರೈ, ವಕೀಲರು, ದಾವೆದಾರರು, ನ್ಯಾಯಾಂಗ, ಸರ್ಕಾರಕ್ಕೆ ಇದು ಉಪಯುಕ್ತ ಮಾಹಿತಿ ನೀಡುವ ಸೇವೆಯಾಗಿದೆ.  ಭಾರತದಾದ್ಯಂತ ನ್ಯಾಯಾಲಯದ ವ್ಯವಸ್ಥೆಗಳಲ್ಲಿ ವಿಚಾರಣೆಗೆ / ಇತ್ಯರ್ಥಕ್ಕೆ ಬಾಕಿ ಉಳಿದಿರುವ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ, ಡೇಟಾವನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಮತ್ತು ಕಕ್ಷಿದಾರರ ಹೆಸರು, ವಕೀಲರ ಹೆಸರು, ಕೇಸ್ ಸಂಖ್ಯೆ, ಎಫ್ ಐಆರ್ ಸಂಖ್ಯೆ, ನ್ಯಾಯಾಲಯದ ಹೆಸರು ಇತ್ಯಾದಿಗಳನ್ನು ಬಳಸಿಕೊಂಡು ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಇ-ಕೋರ್ಟ್ ಸೇವೆಗಳಲ್ಲಿ ಹುಡುಕಬಹುದು. ವಿವಿಧ ನ್ಯಾಯಾಲಯಗಳಿಂದ ಲಭ್ಯವಿರುವ ಡೇಟಾವನ್ನು ವಕೀಲರು ಇತರ ಮಧ್ಯಸ್ಥಗಾರರು ನಿಯಮಿತವಾಗಿ ಮಾಹಿತಿಯನ್ನು ಪಡೆಯಲು ಡೌನ್ ಲೋಡ್ ಮಾಡುತ್ತಾರೆ.

- Advertisement -

ಪ್ರಕರಣದ ಪ್ರಗತಿಯ ಬಗ್ಗೆ. ಇ-ಕೋರ್ಟ್ ಸೇವೆಗಳ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 07-05- 2021 ರಂತೆ ಡೌನ್ ಲೋಡ್ಗಳ ಸಂಖ್ಯೆ 5.81 ಮಿಲಿಯನ್ ಗಿಂತಲೂ ಹೆಚ್ಚು ತಲುಪಿದೆ. ಈ ಪ್ರಮುಖ ಸೇವೆ ಭಾರತದ ಸುಪ್ರೀಂ ಕೋರ್ಟ್ನ ಇ- ಸಮಿತಿಯ ಒಡೆತನದಲ್ಲಿದೆ.  ಭಾರತ ಸರ್ಕಾರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಇ-ಕೋರ್ಟ್ಸ್ ಸರ್ವಿಸ್ ಸೇವೆಯನ್ನು ಹೋಸ್ಟ್ ಮಾಡಿ ಅಭಿವೃದ್ಧಿಪಡಿಸಿರುತ್ತದೆ.

ಇ-ಕೋರ್ಟ್ ಸೇವೆಗಳು ಪ್ರಕರಣಗಳ ಬಗ್ಗೆ ವಾರದ ಎಲ್ಲ ದಿನಗಳಲ್ಲೂ 24X7 ಗಂಟೆಗಳ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿವೆ.

ಆದರೆ, ಕಳೆದ ಸುಮಾರು 3-4 ವಾರಗಳಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸೇವೆ ವಕೀಲರಿಗೆ, ಕಕ್ಷಿದಾರರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಇತರ ಕೆಲವು ಜಿಲ್ಲೆಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ನ್ಯಾಯಾಲಯಗಳು ಸೇವೆಗಳು ಲಭ್ಯವಿವೆ. ಇದೇ ವೇಳೆ, ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿಯೂ ಸೇವೆಗಳಿಗೆ ಸಂಬಂಧಿಸಿದಂತೆ ತೊಂದರೆಯಾಗಿರುವುದು ಕಂಡುಬರುತ್ತದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ. ಪೃಥ್ವಿರಾಜ್ ರೈ  ಹೇಳಿದ್ದಾರೆ.

ಇ-ಕೋರ್ಟ್ ವೆಬ್ ಸೈಟ್ ನಲ್ಲಿ ಉಂಟಾದ ಈ ತಾಂತ್ರಿಕ ಸಮಸ್ಯೆಯಿಂದಾಗಿ ಸಾವಿರಾರು ವಕೀಲರು, ಕಕ್ಷಿದಾರರು ಮತ್ತು ಇತರರಿಗೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲು ಅಡ್ಡಿಯಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಗೌರವಾನ್ವಿತ ದ.ಕ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಗಮನಕ್ಕೆ ತರಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ಮಂಗಳೂರು ವಕೀಲರ ಸಂಘವು ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಕಾನೂನು ಸಚಿವರು, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರ ಗಮನಕ್ಕೆ ಇಮೇಲ್ ಮೂಲಕ ತಂದಿದೆ.

ಇ-ಕೋರ್ಟ್ಸ್ ಸೇವೆಯಲ್ಲಿ ಉಂಟಾಗಿರುವ ಅಡಚಣೆ ಬಗ್ಗೆ ನಿಖರವಾದ ಕಾರಣಗಳು ಇದುವರೆಗೆ ಗೊತ್ತಾಗಿಲ್ಲ. ಆದರೂ, ವಕೀಲರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ತಿಳಿಸುವುದು ಅಗತ್ಯವೆಂದು ಮಂಗಳೂರು ವಕೀಲರ ಸಂಘ ಭಾವಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ನ್ಯಾಯಾಂಗ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಯನ್ನು  ತಕ್ಷಣ ಪರಿಹರಿಸುತ್ತವೆ ಎಂದು ನಾವು ಆಶಿಸುತ್ತಿದ್ದೇವೆ ಎಂದು ಪೃಥ್ವಿರಾಜ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp