ಎರಡು ವರ್ಷಗಳಿಂದ ಸಂಬಳ ಸಿಗದ ಶಿಕ್ಷಕ ಆತ್ಮಹತ್ಯೆ| ಡೆತ್‌ ನೋಟ್ ನಲ್ಲಿ ಬಿಜೆಪಿ ಮಾಜಿ ಶಾಸಕನ ಹೆಸರು

Prasthutha|

ನವದೆಹಲಿ:  ಎರಡು ವರ್ಷಗಳಿಂದ ಸಂಬಳ ಲಭಿಸಲಿಲ್ಲ ಎಂದು ಶಿಕ್ಷಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಡೆತ್​ ನೋಟ್​ನಲ್ಲಿ ಬಿಜೆಪಿಯ ಮಾಜಿ ಶಾಸಕ ಹಾಗೂ ಆತನ ಪತ್ನಿಯ ಹೆಸರಿರುವುದಾಗಿ ತಿಳಿದುಬಂದಿದೆ.

- Advertisement -

ದೆಹಲಿಯ ರೋಹಿಣಿ ಪ್ರದೇಶದ ಖಾಸಗಿ ಶಾಲೆಯೊಂದರ ಶಿಕ್ಷಕ ತನೂಪ್ ಜೋಹರ್​ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ತಾಯಿ, ಸಹೋದರ ಹಾಗೂ ಹೆಂಡತಿಯೊಂದಿಗೆ ಜೀವನ ನಡೆಸುತ್ತಿದ್ದ ಅವರು ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ನಲ್ಲಿ ಎರಡು ವರ್ಷಗಳಿಂದ ಸಂಬಳ ಕೇಳಿದರೂ ಶಾಲೆಯ ಆಡಳಿತದವರು ಸಂಬಳ ಕೊಡುತ್ತಿಲ್ಲ. ನಮ್ಮ ಶಾಲೆ ಬಿಜೆಪಿ ಮಾಜಿ ಶಾಸಕ ಹಾಗೂ ಅವರ ಪತ್ನಿಗೆ ಸೇರಿದ್ದು, ನನ್ನ ಸಾವಿಗೆ ಅವರೇ ಕಾರಣ ಎಂದು ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಶಾಲೆಯ ಆಡಳಿತ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಈ ಹಿಂದೆ 2020ರಲ್ಲಿಯೇ ತನೂಪ್ ತಾವು ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯಿಂದ ಸಂಬಳ ಬಂದಿಲ್ಲವೆಂದು ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಿದ್ದರು.



Join Whatsapp