ರಾಯಚೂರು ಓಪೆಕ್ ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರಪಿತ ಗಾಂಧೀಜಿ, ಅಂಬೇಡ್ಕರ್ ಫೋಟೋಗಳಿಗೆ ಸ್ಟೋರ್ ರೂಮೇ ಗತಿ !
Prasthutha: June 24, 2021

ರಾಯಚೂರು : ನಗರದ ಓಪೆಕ್ ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ, ಸರ್ದಾರ್ ಪಟೇಲ್ ಸೇರಿದಂತೆ ಹಲವರ ಫೋಟೋಗಳಿಗೆ ಆಸ್ಪತ್ರೆಯ ಸ್ಟೋರ್ ರೂಮೇ ಗತಿಯಾಗಿಬಿಟ್ಟಿದೆ. ಆಸ್ಪತ್ರೆಯ ಮುಖ್ಯ ಸಭಾಂಗಣದಲ್ಲಿ ಇವರ ಫೋಟೋಗಳು ಮಾಯವಾಗಿ ಅವೆಲ್ಲವೂ ಸ್ಟೋರ್ ರೂಮಿಗೆ ಸ್ಥಳಾಂತರಗೊಂಡಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಭಾರತದ ಸ್ವತಂತ್ರ ಹೋರಾಟಗಾರರಿಗೆ ಮತ್ತು ಹಿಂದಿನ ಹಿರಿಯ ನಾಯಕರಿಗೆ ತೋರಿದ ಅವಮಾನ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಆಸ್ಪತ್ರೆಯ ವಿಶೇಷ ಅಧಿಕಾರಿ ನಾಗರಾಜ್ ಗದ್ದಾಲ್ ಅವರು ಸಭೆ ನಡೆಸುವ ಸಭಾಂಗಣದ ಗೋಡೆಯು ಖಾಲಿ ಎದ್ದು ಕಾಣುತ್ತಿದೆ. ಅಲ್ಲಿ ಯಾವ ಫೋಟೋಗಳನ್ನೂ ಇಟ್ಟಿರುವುದು ಕಾಣಿಸುತಿಲ್ಲ. ಈ ಕೂಡಲೇ ಸ್ಟೋರ್ ರೂಮಿನಲ್ಲಿರುವ ಫೋಟೋಗಳನ್ನು ಮುಖ್ಯ ಸಭಾಂಗಣಕ್ಕೆ ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
