ಆಂಧ್ರ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ | ಟಿಡಿಪಿ ನಾಯಕ ಪಟ್ಟಾಭಿರಾಮ್ ಬಂಧನ

Prasthutha|

ವಿಜಯವಾಡ: ಆಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ತೆಲುಗು ದೇಶಂ ಪಕ್ಷದ(ಟಿಡಿಪಿ) ರಾಷ್ಟ್ರೀಯ ವಕ್ತಾರ ಕೆ. ಪಟ್ಟಾಭಿರಾಮ್ ನನ್ನು, ಪೊಲೀಸರು ಇಂದು ಬಂಧಿಸಿದ್ದಾರೆ.

- Advertisement -

ಟಿಡಿಪಿ ನಾಯಕನನ್ನು ವಿಜಯವಾಡ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಮಹಾ ನಿರ್ದೇಶಕ ಗೌತಮ್ ಸವಾಂಗ್ ತಿಳಿಸಿದ್ದಾರೆ.

ಈ ಮಧ್ಯೆ ಬುಧವಾರ ಮುಂಜಾನೆ ಮಂಗಳಗಿರಿಯ ಟಿಡಿಪಿಯ ಪ್ರಧಾನ ಕಚೇರಿ ಮತ್ತು ವಿಜಯವಾಡದಲ್ಲಿರುವ ರಾಮ್ ಅವರ ನಿವಾಸವನ್ನು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈ.ಎಸ್.ಆರ್.ಸಿ.ಪಿ)ದ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ.

- Advertisement -

ಗುಂಟೂರಿನ ಮಂಗಳಗಿರಿಯಲ್ಲಿರುವ ಟಿಡಿಪಿಯ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಟ್ಟಾಭಿ ರಾಮ್, ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ಅವಹೇಳನಕಾರಿ ಹೇಳಿಕೆಯ ನಂತರ ಉಭಯ ಪಕ್ಷಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ಹಲವಾರು ಕಾರ್ಯಕರ್ತರು ಗಾಯಗೊಂಡಿದ್ದರು.



Join Whatsapp