ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ನಲ್ಲಿ ಇತಿಹಾಸ ನಿರ್ಮಿಸಿದ ತಸ್ನಿಮ್ ಮಿರ್

Prasthutha|

ನವದೆಹಲಿ: ಗುಜರಾತಿನ 16 ವರ್ಷದ ಬಾಲಕಿ ತಸ್ನಿಮ್ ಮಿರ್ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ನಲ್ಲಿ ಇತಿಹಾಸ ನಿರ್ಮಿಸಿದ್ದು, ವಿಶ್ವದ ನಂಬರ್ ಒನ್ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

- Advertisement -

ಈ ಮೂಲಕ ಅವರು  ಒಲಿಂಪಿಕ್ ಪದಕ ವಿಜೇತರಾದ ಪಿ ವಿ ಸಿಂಧು ಮತ್ತು ಸೈನಾ ನೆಹ್ವಾಲ್ ಅವರಿಂದಲೂ ಮಾಡಲು ಸಾಧ್ಯವಾಗದ ಸಾಧನೆಯನ್ನು ಮಾಡಿದ್ದಾರೆ.

 19 ವರ್ಷದೊಳಗಿನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಇತ್ತೀಚಿಗೆ  ಬಿಡುಗಡೆ ಮಾಡಿರುವ  ಶ್ರೇಯಾಂಕದಲ್ಲಿ, ತಸ್ಮೀನ್ ವಿಶ್ವದ ನಂಬರ್ ಒನ್ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ  ಹೊರಹೊಮ್ಮಿದ್ದಾರೆ.

- Advertisement -

ಕಳೆದ ವರ್ಷ ಬಲ್ಗೇರಿಯಾ, ಫ್ರಾನ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆದ ಟೂರ್ನಿಗಳಲ್ಲಿ ಮಿಂಚುವ ಮೂಲಕ ಮೂರು ಸ್ಥಾನಗಳನ್ನು ತನ್ನ ಹೆಗಲಿಗೇರಿಸಿಕೊಂಡು  ತಸ್ನಿಮ್ ಅಗ್ರಸ್ಥಾನಕ್ಕೆ ಏರಿದ್ದರು. ಸದ್ಯ ತಸ್ನಿಮ್ 10,810 ಅಂಕಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ. ಭಾರತದ ಮತ್ತೊಬ್ಬ ಶಟ್ಲರ್ ಅನುಪಮಾ ಉಪಾಧ್ಯಾಯ 29 ಸ್ಥಾನ ಮೇಲೇರಿ 10ನೇ ಸ್ಥಾನಕ್ಕೆ ತಲುಪಿದ್ದಾರೆ. ಈ ಮಧ್ಯೆ, ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು 19 ವರ್ಷದೊಳಗಿನವರ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಲು ಮಾತ್ರ ಶಕ್ತರಾದರು.



Join Whatsapp