ನಾಪತ್ತೆಯಾಗಿದ್ದ ನಟಿ ರೈಮಾ ಇಸ್ಲಾಂ ಮೃತದೇಹ ಗೋಣಿಚೀಲದಲ್ಲಿ ಪತ್ತೆ !

Prasthutha|

ಢಾಕಾ: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು (45) ಮೃತದೇಹ ಢಾಕಾದ ಹೊರವಲಯದಲ್ಲಿರುವ  ಕೆರಣಿಗಂಜ್‌ ನ ಹಜರತ್‌ ಪುರ ಸೇತುವೆಯ ಬಳಿ ಗೋಣಿಚೀಲದಲ್ಲಿ ಪತ್ತೆಯಾಗಿದೆ.

- Advertisement -

ಶಿಮು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಭಾನುವಾರ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಥಳೀಯರು ಮಾಹಿತಿ ನೀಡಿದ ನಂತರ ಕೆರಣಿಗಂಜ್ ಠಾಣೆಯ ಪೊಲೀಸರ ತಂಡ ಮೃತದೇಹವನ್ನು ಹೊರತೆಗೆದಿದ್ದಾರೆ.

45 ವರ್ಷದ ನಟಿ 1998 ರಲ್ಲಿ ‘ಬರ್ತಮನ್’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ನಂತರ ಅವರು 25 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಬಾಂಗ್ಲಾದೇಶ ಚಲನಚಿತ್ರ ಕಲಾವಿದರ ಸಂಘದ ಸಹಾಯಕ ಸದಸ್ಯರಾಗಿದ್ದರು. ಚಲನಚಿತ್ರಗಳ ಜೊತೆಗೆ, ಅವರು ಕಿರುತೆರೆ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

Join Whatsapp