ಸೆಲ್ಫಿ ತೆಗೆದುಕೊಳ್ಳುವಾಗ ಟ್ಯಾಂಕರ್ ಡಿಕ್ಕಿ ; ಇಬ್ಬರು ಯುವಕರು ಸಾವು

Prasthutha|

ಬೆಂಗಳೂರು: ಕಾರು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ವೇಗವಾಗಿ ಬಂದ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟಿರುವ ದಾರುಣ ಘಟನೆ ಹೊಸಕೋಟೆ ತಾಲ್ಲೂಕಿನ ತಾವರೇಕೆರೆ ಮೇಲುಸೇತುವೆ ರಸ್ತೆಯಲ್ಲಿ ನಡೆದಿದೆ.

- Advertisement -


ದಿನೇಶ್ (25) ಹಾಗೂ ವಿನಯ್ (25) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಮತ್ತಿಬ್ಬರು ಯುವಕರಾದ ಜನಾರ್ದನ್ ಹಾಗೂ ಜಾಸ್ಮಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಲ್ವರು ಸ್ನೇಹಿತರು ನಿನ್ನೆ ತಡರಾತ್ರಿ ವೈಟ್ ಫೀಲ್ಡ್ನಿಂದ ಕೋಲಾರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ತಾವರೆಕೆರೆ ಫ್ಲೈಓವರ್ ಮೇಲೆ ಬರುತ್ತಿದ್ದಂತೆ ಅಲ್ಲಿ ಕಾರು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.


ಆಗ ವೇಗವಾಗಿ ಬರುತ್ತಿದ್ದ ಹಾಲಿನ ಟ್ಯಾಂಕರ್ ಇವರಿಗೆ ಡಿಕ್ಕಿ ಹೊಡೆದಿದೆ. ಕಾರು ಹಾಗೂ ಟ್ಯಾಂಕರ್ ನಡುವೆ ಸಿಲುಕಿದ ನಾಲ್ವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Join Whatsapp