ಮತ್ತೆ ಅಮೆರಿಕಕ್ಕೆ ತೆರಳಿದ ಪುನೀತ್ ಪುತ್ರಿ ಧೃತಿ

Prasthutha|

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಪುತ್ರಿ ಧೃತಿ ಅಮೆರಿಕಕ್ಕೆ ಶನಿವಾರ ತೆರಳಿದ್ದಾರೆ.

- Advertisement -


ಪುನೀತ್ ನಿಧನರಾದ ಹಿನ್ನೆಲೆಯಲ್ಲಿ ಧೃತಿ ತಂದೆ ಅಂತಿಮ ದರ್ಶನಕ್ಕೆ ನ್ಯೂಯಾರ್ಕ್ ನಿಂದ ಬೆಂಗಳೂರಿಗೆ ಬಂದಿದ್ದರು. ಇದೀಗ ತಂದೆಯ ಎಲ್ಲಾ ವಿಧಿ ವಿಧಾನಗಳು ಮುಗಿಯುತ್ತಿದ್ದಂತೆ 15 ದಿನಗಳ ನಂತರ ನ್ಯೂಯಾರ್ಕ್ ಗೆ ಹೊರಟಿದ್ದಾರೆ.


ಮಗಳನ್ನು ಕಳುಹಿಸಿಕೊಡಲು ತಾಯಿ ಅಶ್ವಿನಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಕ್ಟೋಬರ್ 30ರಂದು ಸಂಜೆ 4:15ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಧೃತಿ ಆಗಮಿಸಿದ್ದರು. ಅಲ್ಲಿಂದ ನೇರವಾಗಿ ತಮ್ಮ ನಿವಾಸ ಸದಾಶಿವ ನಗರಕ್ಕೆ ತೆರಳಿ ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ಬಂದು ಅಪ್ಪನ ಅಂತಿಮ ದರ್ಶನ ಪಡೆದಿದ್ದರು.
ಇದೀಗ ವಿದ್ಯಾಭ್ಯಾಸ ಮುಂದುವರಿಸಲು ಮತ್ತೆ ಅಮೆರಿಕಕ್ಕೆ ತೆರಳಿದ್ದಾರೆ.

Join Whatsapp