ಗ್ಲಾಸ್ಗೋ ಶೃಂಗಸಭೆಯಲ್ಲಿ ಭಾಷಣ ಮಾಡಿದ ತಮಿಳುನಾಡು ವಿದ್ಯಾರ್ಥಿನಿ

Prasthutha|

ಗ್ಲಾಸ್ಗೋ: ಸಮಯಕ್ಕೆ ಅನುಗುಣವಾದ ಆವಿಷ್ಕಾರಗಳನ್ನು ಬೆಂಬಲಿಸಲು ಮತ್ತು ಭೂಮಿಗಾಗಿ ಹೊಸ ಪೀಳಿಗೆಯೊಂದಿಗೆ ನಿಲ್ಲುವಂತೆ ವಿಶ್ವ ನಾಯಕರನ್ನು ಒತ್ತಾಯಿಸಿದ ತಮಿಳುನಾಡು ಮೂಲದ ವಿದ್ಯಾರ್ಥಿನಿ ವಿನಿಶಾ ಉಮಾಶಂಕರ್ ಗ್ಲಾಸ್ಗೋ ಹವಾಮಾನ ಶೃಂಗಸಭೆಯಲ್ಲಿ ಗಮನ ಸೆಳೆದಿದ್ದಾರೆ.

- Advertisement -

ಹೊಸ ಪೀಳಿಗೆಯು ವಿಶ್ವ ನಾಯಕರ ಕ್ರಮಕ್ಕಾಗಿ ಕಾದು ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು 15 ವರ್ಷದ ವಿನಿಶಾ ಹೇಳಿದರು.

ಗ್ಲಾಸ್ಗೋ ಶೃಂಗಸಭೆಯ ‘ಕ್ಲೀನ್ ಟೆಕ್ನಾಲಜಿ ಇನ್ನೋವೇಶನ್’ ವಿಭಾಗದಲ್ಲಿ ವಿನಿಶಾ ಅವರ ಭಾಷಣವನ್ನು ಆಲಿಸಿದ ಪ್ರೇಕ್ಷಕರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಉಪಸ್ಥಿತರಿದ್ದರು.

- Advertisement -

ಭಾರತದ ಬೀದಿಗಳಲ್ಲಿ ನಿತ್ಯ ಕಾಣ ಸಿಗುವ ಇದ್ದಿಲು ತುಂಬಿದ ಇಸ್ತ್ರಿ ಪೆಟ್ಟಿಗೆಗೆ ಪರ್ಯಾಯವಾಗಿ ಸೌರಶಕ್ತಿಯನ್ನು ಕಂಡುಹಿಡಿದು ‘ಅರ್ಥ್ಶಾಟ್’ ಪ್ರಶಸ್ತಿಯ ಅಂತಿಮ ಸುತ್ತನ್ನು ತಲುಪಿದ್ದರು. ವಿನಿಶಾ ತನ್ನ ಭಾಷಣದ ನಂತರ ಅರ್ಥ್‌ಶಾಟ್ ಪ್ರಶಸ್ತಿ ವಿಜೇತ ವಿದ್ಯುತ್ ಮೋಹನ್ ಅವರೊಂದಿಗೆ ಮೋದಿ ಅವರನ್ನು ಭೇಟಿಯಾದರು.

Join Whatsapp