ತಮಿಳುನಾಡು | ಕೊಳತ್ತೂರಿನಲ್ಲಿ ಸ್ಟಾಲಿನ್‌ ಮುನ್ನಡೆ, ಕೊಯಮತ್ತೂರಿನಲ್ಲಿ ಕಮಲ್‌ ಹಾಸನ್‌ ಗೆ ಹಿನ್ನಡೆ

Prasthutha|

ಚೆನ್ನೈ: ತಮಿಳುನಾಡಿನ 234 ವಿಧಾನಸಭಾಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಎರಡನೆಯ ಸುತ್ತಿನ ಮತ ಎಣಿಕೆ ಮುಗಿದಿದೆ.

- Advertisement -

ಈ ಸಂದರ್ಭದಲ್ಲಿ ಬಹು ಕುತೂಹಲ ಕೆರಳಿಸಿರುವ ಕೊಳತ್ತೂರಿನಲ್ಲಿ ಸ್ಟಾಲಿನ್‌ ಮುನ್ನಡೆ ಸಾಧಿಸಿದ್ದಾರೆ. ಕೊಯಮತ್ತೂರಿನಲ್ಲಿ ಕಮಲ ಹಾಸನ್‌ಗೆ ತೀವ್ರ ಹಿನ್ನಡೆಯಾಗಿದ್ದು, ಕಾಂಗ್ರೆಸ್‌ನ ಮಯೂರ್‌ ಜಯಕುಮಾರ್‌ ಮುನ್ನಡೆಯಲ್ಲಿದ್ದಾರೆ.

ಈ ಬಾರಿ ಇಬ್ಬರು ಖ್ಯಾತ ನಾಯಕರಾದ ಎಂ. ಕೆ ಸ್ಟಾಲಿನ್ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ ಗೆ ಸ್ಪರ್ಧೆಯೊಡ್ಡಲು ನಟ ಕಮಲ್ ಹಾಸನ್, ಟಿಟಿವಿ ದಿನಕರನ್ ಮತ್ತು ಸೀಮನ್ ಚುನಾವಣಾ ಕಣಕ್ಕಿಳಿದಿದ್ದು, ಇಂದು ಎಲ್ಲರ ಭವಿಷ್ಯ ನಿರ್ಧಾರವಾಗಲಿದೆ.

- Advertisement -

ತಮಿಳುನಾಡಿನಲ್ಲಿ ಡಿಎಂಕೆಯ ಎದುರು ಆಡಳಿತಾರೂಢ ಎಐಎಡಿಎಂಕೆ ಪರಾಭವಗೊಳ್ಳಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿತ್ತು.

Join Whatsapp