ತೈಲ ಬೆಲೆ ಏರಿಕೆಗೆ ತಾಲಿಬಾನ್ ಕಾರಣ | ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್

Prasthutha|

ಧಾರವಾಡ : ಭಾರತದಲ್ಲಿ ತೈಲ ಬೆಲೆ ಏರಿಕೆಗೆ ತಾಲಿಬಾನ್‌ ಸಮಸ್ಯೆ ಕಾರಣ. ಇದರಿಂದಾಗಿ ಅನಿಲ ಬೆಲೆ ಏರಿಕೆಯಾಗಿದೆ” ಎಂದು ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್‌ ಬೆಲ್ಲದ್‌ ತಿಳಿಸಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತಾಲಿಬಾನ್‌ ಸಮಸ್ಯೆಯ ಹಿನ್ನೆಲೆ ಅನಿಲ ಬೆಲೆ ಏರಿಕೆಯಾಗಿದೆ. ಕಚ್ಚಾ ತೈಲ ಕೂಡಾ ಬರುತ್ತಿಲ್ಲ. ಹಾಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಏಕೆ ಬೆಲೆ ಏರಿಕೆಯಾಗಿದೆ ಹಾಗೂ ಗ್ಯಾಸ್‌ ದರ ಏಕೆ ಹೆಚ್ಚಳವಾಗಿದೆ. ಈ ಬಗ್ಗೆ ಮತದಾರರಿಗೆ ಮಾಹಿತಿಯಿದ್ದು ಮತದಾರರೇ ವಿಚಾರ ಮಾಡಿ ಮತ ಹಾಕುತ್ತಾರೆ” ಎಂದಿದ್ದಾರೆ.

- Advertisement -

ಇನ್ನು ಈ ಬಾರಿ ಹುಬ್ಬಳ್ಳಿ, ಧಾರವಾಡ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಬಿಜೆಪಿಯ ಅಭಿವೃದ್ದಿಯನ್ನು ಗಮನಿಸಿ ಜನರು ಮತ ಹಾಕುತ್ತಾರೆ. ಈ ಹಿನ್ನೆಲೆ ಪಾಲಿಕೆ ಚುನಾವಣೆಯಲ್ಲಿ ನಾವು 55-60 ಸೀಟು ಗೆಲ್ಲುತ್ತೇವೆ. ಪಾಲಿಕೆಯಲ್ಲಿ ಈ ಬಾರಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ” ಎಂದು ತಿಳಿಸಿದ್ದಾರೆ.

- Advertisement -