ಸುದೀಪ್ ಜನ್ಮದಿನ ಆಚರಣೆ: ಕೋಣ ಬಲಿಕೊಟ್ಟು ವಿಕೃತಿ ಮೆರೆದ ಅಭಿಮಾನಿಗಳು!

Prasthutha|

ಬಳ್ಳಾರಿ: ನಟ ಸುದೀಪ್ ಹುಟ್ಟುಹಬ್ಬ ಹಿನ್ನೆಲೆ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಕೋಣವನ್ನು ಬಲಿ ನೀಡಿ ರಕ್ತಾಭಿಷೇಕ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.


ಸುದೀಪ್ ಅವರ ಕಟೌಟ್ ಮುಂದೆ ಕೋಣವನ್ನು ಬಲಿ ನೀಡಿ ಹುಟ್ಟಹಬ್ಬವನ್ನು ಆಚರಿಸಲಾಗಿದೆ. ಕೋಣ ಕಡಿಯುವುದನ್ನು ವಿಡಿಯೋ ಮಾಡಲಾಗಿದ್ದು, ಅದು ಸಾಕಷ್ಟು ಸದ್ದು ಮಾಡುತ್ತಿದೆ.

- Advertisement -


ಸುದೀಪ್ ಅಭಿಮಾನಿಗಳಿಂದ ಪ್ರಾಣಿ ಹಿಂಸೆ ಆಗಿರುವುದು ಪ್ರಾಣಿದಯಾ ಸಂಘದಿಂದ ಆಕ್ಷೇಪ ವ್ಯಕ್ತವಾಗಿದೆ. ಹುಟ್ಟುಹಬ್ಬ ಸಂದರ್ಭದಲ್ಲಿ ಈ ರೀತಿಯಾಗಿ ಹುಚ್ಚಾಟ ಮೆರೆಯುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಗೋಹತ್ಯೆ ನಿಷೇಧದ ಬಗ್ಗೆ ಹೊಸಪೇಟೆಯಲ್ಲಿ ಅಧಿಕಾರಿಗೆ ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌಹ್ಹಾಣ್ ಮಾತನಾಡಿದ್ದರು. ಜಿಲ್ಲೆಗೆ ಸಚಿವರು ಬಂದು ಹೋಗಿ ಎರಡೇ ದಿನದಲ್ಲಿ ಪ್ರಾಣಿಬಲಿ ಕೊಟ್ಟು ಅಭಿಮಾನಿಗಳು ವಿಕೃತಿ ಮೆರೆದಿದ್ದಾರೆ.

- Advertisement -