ದುಂದು ವೆಚ್ಚವನ್ನು ತಡೆಯಲು ಪ್ರಮಾಣವಚನ ಸಮಾರಂಭವನ್ನು ರದ್ದುಪಡಿಸಿದ ತಾಲಿಬಾನ್ ಸರ್ಕಾರ

Prasthutha|

ಕಾಬೂಲ್: ತಾಲಿಬಾನ್ ಇಂದು ನಡೆಯಬೇಕಾಗಿದ್ದ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭವನ್ನು ರದ್ದುಪಡಿಸಿದೆ. ತೀವ್ರ ರೀತಿಯ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದುಂದು ವೆಚ್ಚವನ್ನು ತಡೆಯುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ.

- Advertisement -

ಈ ಮೊದಲು ತನ್ನ ಹೇಳಿಕೆಯಲ್ಲಿ ತಾಲಿಬಾನ್ ಸೆಪ್ಟೆಂಬರ್ 11 ರಂದು ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿತ್ತು.

ಸದ್ರಿ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸುವಂತೆ ರಷ್ಯಾ, ಇರಾನ್, ಚೀನಾ, ಕತಾರ್, ಪಾಕಿಸ್ತಾನ ಮತ್ತು ಭಾರತವನ್ನು ಕೋರಲಾಗಿತ್ತು. ಆದರೆ 9/11 ಘಟನೆಯ ವಾರ್ಷಿಕೋತ್ಸವದ ವೇಳೆ ಈ ಸಮಾರಂಭವನ್ನು ನಡೆಸದಂತೆ ಅಂತಾರಾಷ್ಟ್ರೀಯ ಸಮುದಾಯದಿಂದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಸಮಾರಂಭವನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕತಾರ್ ಪಾಶ್ಚಿಮಾತ್ಯ ರಾಷ್ಟ್ರ ಮತ್ತು ತಾಲಿಬಾನ್ ಸರ್ಕಾರದ ನಡುವೆ ಮಧ್ಯಸ್ಥಿಕೆ ವಹಿಸಿದೆ.

Join Whatsapp