ಟಿ20 ವಿಶ್ವಕಪ್‌|  34ನೇ ವಸಂತಕ್ಕೆ ಕಾಲಿಟ್ಟ ಕೊಹ್ಲಿ,  ಮೆಲ್ಬೋರ್ನ್‌ನಲ್ಲಿ ವಿರಾಟ್‌ ಹುಟ್ಟುಹಬ್ಬ ಆಚರಣೆ, ಶುಭಾಶಯಗಳ ಮಹಾಪೂರ

Prasthutha|

ನವದೆಹಲಿ: ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಶನಿವಾರ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.  ಕ್ರಿಕೆಟ್‌ ವಲಯದಲ್ಲಿ ಕಿಂಗ್‌ ಕೊಹ್ಲಿ ಎಂದೇ ಚಿರಪರಿಚಿತರಾಗಿರುವ ವಿರಾಟ್‌, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.

- Advertisement -

ಭಾನುವಾರ ಮೆಲ್ಬೋರ್ನ್‌ನಲ್ಲಿ ಭಾರತ-ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗುತ್ತಿವೆ. ಸೆಮಿಫೈನಲ್‌ ಲೆಕ್ಕಾಚಾರಗಳು ಸುಗಮವಾಗಲು ಟೀಮ್‌ ಇಂಡಿಯಾ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಈ ಹಿನ್ನಲೆಯಲ್ಲಿ ಮಹತ್ವದ ಪಂದ್ಯಕ್ಕಾಗಿ ಉಭಯ ತಂಡಗಳು ಕಠಿಣ ತಾಲೀಮಿನಲ್ಲಿ ತೊಡಗಿದೆ.

ಶನಿವಾರ ಟೀಮ್‌ ಇಂಡಿಯಾ ಸದಸ್ಯರು ಕೇಕ್‌ ಕತ್ತರಿಸಿ ವಿರಾಟ್‌ ಕೊಹ್ಲಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಭ್ಯಾಸಕ್ಕೆ ತೆರಳುವ ಮುನ್ನ ಹೊಟೇಲ್‌ನಲ್ಲಿ ತಂಡದ ಆಟಗಾರರು, ಕೋಚಿಂಗ್‌ ಸಿಬ್ಬಂದಿ ಸೇರಿದಂತೆ ಎಲ್ಲರೂ ಈ ಸಂದರ್ಭದಲ್ಲಿ ಕೊಹ್ಲಿಗೆ ಕೇಕ್‌ ತಿನ್ನಿಸಿ, ಮುಖಕ್ಕೆ ಹಚ್ಚಿ ಸಂಭ್ರಮಿಸಿದರು.

- Advertisement -

ಇಂಡಿಯನ್‌ ಕ್ರಿಕೆಟ್‌ ಟೀಮ್‌ ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ. ಕೊಹ್ಲಿಯ ಹುಟ್ಟುಹಬ್ಬಕ್ಕೆ ಸಹ ಆಟಗಾರರು, ಗಣ್ಯರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Join Whatsapp