ಟಿ20 ವಿಶ್ವಕಪ್ ಸೆಮಿಫೈನಲ್ | ಪಾಕಿಸ್ತಾನದ ಗೆಲುವಿಗೆ 153 ರನ್ ಗಳ ಗುರಿ ನೀಡಿದ ನ್ಯೂಜಿಲೆಂಡ್

Prasthutha|

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವಿಗೆ ನ್ಯೂಜಿಲೆಂಡ್ 153 ರನ್ಗಳ ಸವಾಲಿನ ಗುರಿ ನೀಡಿದೆ.

- Advertisement -


ಸಿಡ್ನಿ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೇನ್ ವಿಲಿಯಮ್ಸನ್ ಬಳಗ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದೆ.
ಕಿವೀಸ್ ಬಳಗಕ್ಕೆ ಆರಂಭದಲ್ಲೇ ಶಾಹಿನ್ ಅಫ್ರೀದಿ ಆಘಾತವಿಕ್ಕಿದ್ದರು. ಪ್ರಥಮ ಓವರ್ನ 3ನೇ ಎಸೆತದಲ್ಲೇ ಆರಂಭಿಕ ಫಿನ್ ಆಲೆನ್ ಅವರನ್ನು ಎಲ್ ಬಿಡಬ್ಲ್ಯೂ ಬಲೆಯಲ್ಲಿ ಕೆಡವುವಲ್ಲಿ ಅಫ್ರೀದಿ ಯಶಸ್ವಿಯಾಗಿದ್ದರು. ಮತ್ತೋರ್ವ ಆರಂಭಿಕ ಡೆವೋನ್ ಕಾನ್ವೆ (21) ರನ್ ಗಳಿಸಿದ್ದ ವೇಳೆ ರನೌಟ್ ಗೆ ಬಲಿಯಾದರು.


ಅಪಾಯಕಾರಿ ಬ್ಯಾಟ್ಸ್ ಮನ್ ಗ್ಲೆನ್ ಪಿಲಿಫ್ಸ್ (6) ರನ್ ಗಳಿಸಿದ್ದ ವೇಳೆ ಮುಹಮ್ಮದ್ ನವಾಝ್ ಎಸೆತದಲ್ಲಿ ಬೌಲರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
ಆದರೆ ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕೆ ಇಳಿದ ನಾಯಕ ಕೇನ್ ವಿಲಿಯಮ್ಸನ್ (46) ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ, ಶಾಹಿನ್ ಅಫ್ರೀದಿ ಎಸೆದ 16 ಓವರ್ನ ಎರಡನೇ ಬಾಲ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಅರ್ಧಶತಕ ವಂಚಿತರಾದರು. ಡೇರಿಲ್ ಮಿಚೆಲ್ 35 ಎಸೆತಗಳಲ್ಲಿ 53 ರನ್ ಗಳಿಸಿ ಅಜೇಯರಾಗುಳಿದರು.

Join Whatsapp