ಸಿರಿಯಾ: ಉತ್ತರ ಸಿರಿಯಾದ ಅಲ್-ಬಾಬ್ ಪಟ್ಟಣದ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ ಕನಿಷ್ಠ 14 ನಾಗರಿಕರು ಮೃತಪಟ್ಟಿದ್ದು, 38 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಐವರು ಮಕ್ಕಳು ಎಂದು ವರದಿಯಾಗಿದೆ.
ಈ ದಾಳಿಯು ಟರ್ಕಿ ಬೆಂಬಲಿತ ವಿರೋಧ ಪಕ್ಷದ ಹೋರಾಟಗಾರರ ಕೃತ್ಯ ಎಂದು ಸಿರಿಯಾ ಸರಕಾರ ದೂಷಿಸಿದೆ. ವಾಯು ದಾಳಿಯೊಂದರಲ್ಲಿ ಯುನೈಟಡ್ ಸ್ಟೇಟ್ ಬೆಂಬಲಿತ ಕುರ್ದಿಶ್ ಹೋರಾಟಗಾರನ ಕೊಲೆಯ ಬಳಿಕ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಟರ್ಕಿಯು 2016 ರಿಂದ ಸಿರಿಯಾದ ಮೂರು ಗಡಿಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದುದಲ್ಲದೇ, ಸಿರಿಯಾದ ಉತ್ತರದಾದ್ಯಂತ ಪ್ರದೇಶವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ.
ಇತ್ತೀಚಿನ ತಿಂಗಳುಗಳಲ್ಲಿ ಟರ್ಕಿಯು ಯುಎಸ್ ಬೆಂಬಲಿತ ಕುರ್ದಿಶ್ ಪಡೆಗಳನ್ನು ‘ಭಯೋತ್ಪಾದಕ ಗುಂಪು’ ಎಂದು ಲೇಬಲ್ ಹಚ್ಚಿ, ಇದರ ವಿರುದ್ಧ ಹೊಸ ಕಾರ್ಯಾಚರಣೆಯ ಬೆದರಿಕೆ ಹಾಕಿತ್ತು.