ಒಂದು ನೂರು ವರ್ಷಗಳಿಂದಲೂ ಒಂದು ಸಾವಿರ ಪ್ರತಿಗಳ ಮಾರಾಟ ದಾಟದ ಕನ್ನಡ ಪುಸ್ತಕಗಳು : ಪುರುಷೋತ್ತಮ ಬಿಳಿಮಲೆ ವಿಷಾದ

Prasthutha|

ಬೆಂಗಳೂರು: ಕನ್ನಡ ಪುಸ್ತಕಗಳ ಮಾರಾಟ ಒಂದು ನೂರು ವರ್ಷಗಳಿಂದಲೂ ಒಂದು ಸಾವಿರ ಪ್ರತಿಗಳು ದಾಟಲಿಲ್ಲ ಎಂದು ಜವಾಹರ ಲಾಲ್ ನೆಹರು ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಚಿಂತಕ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಶುಕ್ರವಾರ ಸಂಜೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ದೇಶಕ ಎನ್ ಆರ್ ವಿಶುಕುಮಾರ್ ಅವರ ಪತ್ನಿ ಹೆಚ್ ಆರ್ ಸುಜಾತಾ ಅವರ ಮಣಿಬಾಲೆ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದ ಪುರುಷೋತ್ತಮ , ರಾಜ್ಯದಲ್ಲಿ ಮೂವತ್ತು ಸಾವಿರ ಕನ್ನಡ ಅಧ್ಯಾಪಕರಿದ್ದರೂ ಇತ್ತೀಚಿನ ದಿನಗಳಲ್ಲಿ ಕನ್ನಡ ಕವನ ಸಂಗ್ರಹ ಪುಸ್ತಕಗಳ ಮಾರಾಟ ಮೂರು ನೂರು ದಾಟುತ್ತಿಲ್ಲ ಎಂಬ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.

- Advertisement -

ಕನ್ನಡಿಗರ ಸಂಖ್ಯೆಯಲ್ಲಿ ಕುಸಿತ !

ಕನ್ನಡ ಮಾತನಾಡುವವರ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ. ಹಿಂದಿ ಭಾಷೆಯ ಪ್ರಗತಿ ಶೇಕಡಾ 66 ಕ್ಕೆ ಪ್ರತಿಯಾಗಿ ಕನ್ನಡದ ಬೆಳವಣಿಗೆ ಶೇಕಡಾ 3.75 ಮಾತ್ರ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕೃತಿ ಪರಿಚಯ ಮಾಡಿದ ಮಹಾರಾಣಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಎಂ ಎಸ್ ಆಶಾದೇವಿ ಅವರು ಮಣಿಬಾಲೆ ಕೃತಿಯಲ್ಲಿ ಹೆಚ್ ಆರ್ ಸುಜಾತಾ ಅವರು ಒಂದು ಊರಿನವಳೇ ಆಗಿ ಆ ಊರಿನಿಂದ ದೂರವಾಗಿ ನಂತರ  ಆ ಊರನ್ನು ಕಟ್ಟುಕೊಟ್ಟಿದ್ದಾರೆ ಎಂದರು.

ಇತಿಹಾಸ ನೋಡುವ ಕಣ್ಣು ಮತ್ತು ದೃಷ್ಟಿಕೋನ ಬದಲಾದರೆ ಇತಿಹಾಸದ ವಿನ್ಯಾಸವೂ ಬದಲಾಗುತ್ತದೆ ಎಂದು ತಿಳಿಸಿದ ಅವರು ಅಡುಗೆಮನೆ ಲೋಕದಿಂದ ರಾಜಕಾರಣದ ಲೋಕಕ್ಕೆ ಕರೆತರುವ ಈ ಕೃತಿಯು ದಟ್ಟ ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡುತ್ತದೆ ಎಂದು ಬಣ್ಣಿಸಿದರು.

ಅನುತ್ಪಾದಕ ಎಂದು ಬಿಂಬಿಸುವ ಹೆಣ್ಣಿನ ಉತ್ಪಾದಕ ಶಕ್ತಿಯನ್ನು ಈ ಕೃತಿ ಹೊರಹಾಕುತ್ತದೆ ಎಂದು ತಿಳಿಸಿದರಲ್ಲದೆ ಗಾಂಧಿ ಬಂದ ನಂತರದ ಸ್ಥಾನದಲ್ಲಿ ಈ ಕೃತಿ ನಿಲ್ಲುತ್ತದೆ. ಇತಿಹಾಸ ನೋಡುವ ಕಣ್ಣು ಮತ್ತು ದೃಷ್ಟಿಕೋನ ಬದಲಾದರೆ ವಿನ್ಯಾಸವೂ ಬದಲಾಗುತ್ತದೆ ಎಂದು ಹೇಳಿದರು.

- Advertisement -