ಮಾತು ತಪ್ಪಿದ ಮೈಸೂರು ಪಾಲಿಕೆ | ತಾನೇ ಗ್ರಂಥಾಲಯ ನಿರ್ಮಿಸಲು ಮುಂದಾದ ಪುಸ್ತಕ ಪ್ರೇಮಿ ಇಸಾಕ್

Prasthutha|

► ಎಂಟು ತಿಂಗಳ ಹಿಂದೆ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿ ಭಸ್ಮ‌ ಮಾಡಿದ್ದ ದುಷ್ಕರ್ಮಿಗಳು !

- Advertisement -

ಮೈಸೂರು: ಕಳೆದ ಎಂಟು ತಿಂಗಳ ಹಿಂದೆ ಮೈಸೂರಿನ ರಾಜೀವ್ ನಗರದಲ್ಲಿದ್ದ ಪುಸ್ತಕ ಪ್ರೇಮಿ ಪ್ರೇಮಿ ಸೈಯದ್ ಇಸಾಕ್ ರವರ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದರು. ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿತ್ತಲ್ಲದೇ ಜನಾಕ್ರೋಶಕ್ಕೂ ಕಾರಣವಾಗಿತ್ತು. ಗ್ರಂಥಾಲಯವನ್ನು ಪುನರ್ ನಿರ್ಮಿಸಿ ಕೊಡುವುದಾಗಿ ಹೇಳಿದ್ದ  ಮೈಸೂರು ಮಹಾನಗರ ಪಾಲಿಕೆ ಮಾತು ತಪ್ಪಿದ್ದಾಗಿ ಇಸಾಕ್ ದೂರಿದ್ದಾರೆ. ಅಲ್ಲದೇ ಪಾಲಿಕೆ ನಡೆಯಿಂದ ಬೇಸರಗೊಂಡ ಸೈಯದ್ ಇಸಾಕ್, ದಾನಿಗಳು ನೀಡಿದ ಹಣದಿಂದ ತಾವೇ ಗ್ರಂಥಾಲಯ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ.

ದುಷ್ಕರ್ಮಿಗಳಿಂದ ಭಸ್ಮವಾಗಿದ್ದ ಗ್ರಂಥಾಲಯಕ್ಕೆ ನೆರವಾಗಲು ಹಲವು ದಾನಿಗಳು ಮುಂದೆ ಬಂದಿದ್ದರು. ರಾಜೀವ್ ನಗರದಲ್ಲಿ ಸೈಯದ್ ನಿರ್ಮಿಸಿಕೊಂಡಿದ್ದ ಪುಟ್ಟ ಗುಡಿಸಿಲಿನಂತಹ ಗ್ರಂಥಾಲಯವನ್ನು ಬೆಂಕಿ ಹಚ್ಚಿ ಭಸ್ಮ‌ ಗೈದಿದ್ದರು. ಘಟನೆಯ ಬೆನ್ನಲ್ಲೇ ಮೈಸೂರು ಪಾಲಿಕೆ ಗ್ರಂಥಾಲಯದ ಪುನರ್ ನಿರ್ಮಾನದ ಭರವಸೆಯನ್ನು ನೀಡಿತ್ತು, ಆದರೆ ಪಾಲಿಕೆ ಇದುವರೆಗೂ ನಿರ್ಮಾಣ ಮಾಡಲು ಮುಂದೆ ಬಂದಿಲ್ಲ ಎಂದು ಇಸಾಕ್ ಆರೋಪಿಸಿದ್ದಾರೆ.

- Advertisement -

ದಾನಿಗಳ ರೂಪದಿಂದ ಬಂದ ಹಣದ ಮೂಲಕ ಇದೀಗ ಗ್ರಂಥಾಲಯ ನಿರ್ಮಿಸಲು ಹೊರಟಿರುವ ಇಸಾಕ್ , ಅಧಿಕಾರಿಗಳು ಕಳೆದ ಎಂಟು ತಿಂಗಳಿನಿಂದ ಗ್ರಂಥಾಲಯ ನಿರ್ಮಾಣ ಮಾಡಲಿಲ್ಲ. ವಿದ್ಯಾರ್ಥಿಗಳೂ ‌ಇಂದಿಗೂ ಬಯಲು ಗ್ರಂಥಾಲಯದಲ್ಲಿ ಬಂದು ಓದುತ್ತಾರೆ. ಪುಸ್ತಕ ಹಾಳಾಗುವುದನ್ನು ನೋಡಲಾಗದೆ ನನಗೆ ದೊರೆತ ಹಣದಲ್ಲಿಯೇ ಗ್ರಂಥಾಲಯ ನಿರ್ಮಿಸುತ್ತಿದ್ದೇನೆ,” ಎಂದು ಸೈಯದ್ ತಿಳಿಸಿದ್ದಾರೆ.



Join Whatsapp