ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರಿನಲ್ಲಿ ಬಂದೂಕು, ಸ್ಪೋಟಕ ಸಾಮಾಗ್ರಿ ಪತ್ತೆ: ಆರೋಪಿ ಬಂಧನ

Prasthutha|

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಪರವಾನಿಗೆ ಹೊಂದಿರದ ಬಂದೂಕು ಹಾಗೂ ಸ್ಪೋಟಕ ಸಾಮಾಗ್ರಿಗಳನ್ನು ಹೊಂದಿದ್ದ ಯುವಕನೋರ್ವನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಉಡುಪಿ ತಾಲೂಕಿನ ಬ್ರಹ್ಮಾವರ ಹಾವಂಜೆಯ ರೋನಿ ಡಿಸೋಜ (32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆಯ 5.30ರ ಸುಮಾರಿಗೆ ವಿಮಾನ ನಿಲ್ದಾಣದ ಸಿಐಎಸ್ಎಫ್ ಸಿಬ್ಬಂದಿಯಾದ ಎಂ.ಮೊಹಾಂತೊ ಹಾಗೂ ಟಿ.ಮೋಹರ್ ಎಂಬವರು ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದರು.‌ ಈ ಸಂದರ್ಭದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಕುವೈತ್ ನಿಂದ ಬರುತ್ತಿರುವ ತನ್ನ ಸಂಬಂಧಿಕರೋರ್ವರನ್ನು ಕರೆದುಕೊಂಡು ಬರಲೆಂದು ಆರೋಪಿ‌ ರೋನಿ ಡಿಸೋಜ ಮಂಗಳೂರಿನ ಏರ್ ಪೋರ್ಟ್ ಗೆ ಬಂದಿದ್ದ. ಈತ ಪಾರ್ಕಿಂಗ್ ಏರಿಯಾದಲ್ಲಿ  ನಿಲ್ಲಿಸಿದ್ದ ಫೋರ್ಡ್ ಫಿಯಾಸ್ಟೊ ಕಾರಿನಲ್ಲಿ ಬಂದೂಕು ಕಂಡು‌ ಬಂದಿದೆ‌. ಈ ಬಗ್ಗೆ ರೋನಿ ಡಿಸೋಜನಲ್ಲಿ ವಿಚಾರಿಸಿದಾಗ ಆತ ಸರಿಯಾದ ಉತ್ತರ ನೀಡದಿದ್ದರೂ, ಬಳಿಕ ಆತ ಶಿಕಾರಿ ಮಾಡುತ್ತಿರುವ ವಿಚಾರದ ಬಗ್ಗೆ ಒಪ್ಪಿದ್ದಾನೆ.

- Advertisement -

ತಕ್ಷಣ ವಿಮಾನ ನಿಲ್ದಾಣದ ಸಿಐಎಸ್‌ಎಫ್ ಸಿಬ್ಬಂದಿ ಪರಿಶೀಲನೆ ನಡೆಸಿ, ಈ ಬಗ್ಗೆ ಬಜ್ಪೆ ಪೊಲೀಸರು ದೂರು ದಾಖಲಿಸಿದ್ದಾರೆ. ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿ ಎರಡು ಬಂದೂಕು, ಸ್ಪೋಟಕ ಸಾಮಾಗ್ರಿಗಳು ಸೇರಿದಂತೆ ಕಾರು ಸೇರಿದಂತೆ 2ಲಕ್ಷ ರೂ. ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Join Whatsapp