ಬೆಂಗಳೂರು: ರೇಷನ್ ಪಡೆಯದ ಕಾರ್ಡುದಾರರಿಗೆ ಬಿಗ್ ಶಾಕ್ ಸರಕಾರ ನೀಡಿದ್ದು, 6 ತಿಂಗಳಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ಅಮಾನತು ಮಾಡಲು ಆಹಾರ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಬರೋಬ್ಬರಿ 3.26 ಲಕ್ಷದಷ್ಟು ಫಲಾನುಭವಿಗಳು ಆರು ತಿಂಗಳಿನಿಂದ ರೇಷನ್ ಪಡೆಯುತ್ತಿಲ್ಲ. ಆಹಾರ ಇಲಾಖೆ ಪಡಿತರ ಪಡೆಯದ ಕಾರ್ಡ್ಗಳ ಡೇಟಾ ಸಂಗ್ರಹಿಸಿ ಕಾರ್ಡ್ ಅಮಾನತಿಗೆ ಆದೇಶ ನೀಡಿದೆ. ಹೀಗಾಗಿ ಈ ವಾರದಲ್ಲಿ 3.26 ಲಕ್ಷ ಕಾರ್ಡ್ಗಳು ಸಸ್ಪೆಂಡ್ ಆಗಲಿವೆ.
ಈ ನಿಯಮ ಅಂತ್ಯೋದಯ, ಬಿಪಿಎಲ್, ಪಿಹೆಚ್ಹೆಚ್ ಕಾರ್ಡ್ಗೆ ಅನ್ವಯಿಸುತ್ತದೆ. ಇಲಾಖೆ ಡೇಟಾ ಕಲೆಕ್ಟ್ ಮಾಡಿಕೊಂಡಿದ್ದು, ಈ ಕಾರ್ಡ್ಗಳ ಅಮಾನತಿಗೆ ಆದೇಶಿಸಿದೆ. ಈ ವಾರದಲ್ಲಿ 3.26 ಲಕ್ಷ ಕಾರ್ಡ್ಗಳು ಸಸ್ಪೆಂಡ್ ಆಗಲಿವೆ.
ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಗಳ ಹೆಸರಲ್ಲಿ ಕಾರ್ಡ್ ಹೊಂದಿರುವ ಫಲಾನುಭವಿಗಳ ಹೆಸರು ಡಿಲೀಟ್ ಮಾಡಿ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ಇಲಾಖೆ ಶಾಕ್ ಕೊಟ್ಟಿತ್ತು. ಇದೀಗ ಕಳೆದ ಆರು ತಿಂಗಳಿನಿಂದ ಅಕ್ಕಿ ಪಡೆಯದ ರೇಷನ್ ಕಾರ್ಡ್ಗಳನ್ನು ಸಸ್ಪೆಂಡ್ ಮಾಡಲು ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಅಂತ್ಯೋದಯ, ಪಿಹೆಚ್ಹೆಚ್ ಹಾಗೂ NPHH ನಲ್ಲಿ ಒಟ್ಟು 1,52,79,343 ರಷ್ಟು ಕಾರ್ಡ್ಗಳಿದ್ದು ಒಟ್ಟು 52,34,148 ರಷ್ಟು ಫಲಾನುಭವಿಗಳಿದ್ದಾರೆ. ಇನ್ನು ಬಿಪಿಎಲ್ನಲ್ಲಿ 1,27,82,893 ಕಾರ್ಡ್ಗಳಿದ್ದು, ಒಟ್ಟು 4,37,65,128 ರಷ್ಟು ಫಲಾನುಭವಿಗಳಿದ್ದಾರೆ. ಇದರಲ್ಲಿ ಒಟ್ಟು 3 ಲಕ್ಷದ 26 ಸಾವಿರ ಕಾರ್ಡ್ ಗಳನ್ನು ಸಸ್ಪೆಂಡ್ ಮಾಡಲಾಗುತ್ತಿದ್ದು, ಈ ಕಾರ್ಡ್ ಸಸ್ಪೆಂಡ್ ನಂತರ ಹೊಸ ಕಾರ್ಡ್ ಗಳಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.