ಕುಮಟಾ-ಶಿರಸಿ ಹೈವೇ ನವೆಂಬರ್ 1 ರಿಂದ 7 ತಿಂಗಳು ಸಂಪೂರ್ಣ ಸ್ಥಗಿತ

Prasthutha|

ಶಿರಸಿ: ಕುಮಟಾ-ಶಿರಸಿ ಹೈವೇಯಲ್ಲಿ ಸೇತುವೆ ಮತ್ತು ದೇವಿಮನೆ ಘಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಸಬೇಕಾದ್ದರಿಂದ ನವೆಂಬರ್ 1 ರಿಂದ 2024ರ ಮೇ 31 ರವರೆಗೆ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ ಎಂದು ಸಹಾಯಕ ಆಯುಕ್ತ ದೇವರಾಜ ಆರ್. ತಿಳಿಸಿದ್ದಾರೆ.

- Advertisement -

ಶಿರಸಿ ತಾಲೂಕು ವ್ಯಾಪ್ತಿಯಲ್ಲಿ 3 ಸೇತುವೆ ಹಾಗೂ ದೇವಿಮನೆ ಘಟ್ಟದಲ್ಲಿ ಹೆದ್ದಾರಿ ನಿರ್ಮಾಣ ಮಾಡಬೇಕಾದ್ದರಿಂದ ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ. 2020ರಲ್ಲಿ ಗುತ್ತಿಗೆ ಪಡೆದ ಕಂಪೆನಿಯು ಶಿರಸಿ-ಕುಮಟಾ ಹೆದ್ದಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿತ್ತು. ಆ ಆದೇಶವನ್ನು ಮುಂದುವರೆಸಿ ನ.1 ರಿಂದ 7 ತಿಂಗಳು ಹೆದ್ದಾರಿಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


ತಾಲೂಕು ವ್ಯಾಪ್ತಿಯ ಸಾಕಷ್ಟು ಹಳ್ಳಿಗಳಿಗೆ ಈ ರಸ್ತೆಯ ಮೂಲಕ ತೆರಳಬೇಕಾದ್ದರಿಂದ ಅವರಿಗೆ ಪಕ್ಕದಲ್ಲಿ ಸಣ್ಣ ರಸ್ತೆ ನಿರ್ಮಿಸಿಕೊಡಲಾಗುತ್ತದೆ. ಶಿರಸಿ ತಾಲೂಕು ವ್ಯಾಪ್ತಿಯ 33 ಕಿ.ಮೀ ಹೆದ್ದಾರಿಯಲ್ಲಿ 27 ಕಿ.ಮೀ ಈಗಾಗಲೇ ಮುಕ್ತಾಯಗೊಂಡಿದೆ. 2 ಸೇತುವೆ ನಿರ್ಮಾಣವಾಗಬೇಕಾದ್ದರಿಂದ ರಸ್ತೆ ಸ್ಥಗಿತಗೊಳಿಸುವುದು ಅತ್ಯವಶ್ಯವಾಗಿದೆ ಎಂದೂ ಅವರು ತಿಳಿಸಿದರು.