‘ಅಮಾನತುಗೊಳಿಸಿದ ಸಂಸದ’: ಟ್ವಿಟರ್​ ಬಯೋ ಬದಲಾಯಿಸಿದ ರಾಘವ್​ ಚಡ್ಡಾ

Prasthutha|

ನವದೆಹಲಿ: ರಾಜ್ಯಸಭೆಯಿಂದ ಅಮಾನತುಗೊಂಡ ನಂತರ ಆಮ್​ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು ಸಾಮಾಜಿಕ ಮಾಧ್ಯಮ ಎಕ್ಸ್​ ಆ್ಯಪ್​ ನ ತಮ್ಮ ಪ್ರೊಫೈಲ್ ಅನ್ನು ಬದಲಾಯಿಸಿದ್ದಾರೆ.

- Advertisement -

ಮುಂಚಿನ ಪ್ರೊಫೈಲ್‌ ನಲ್ಲಿ ಸಂಸತ್​ ಸದಸ್ಯರು ಎಂದು ಉಲ್ಲೇಖಿಸಿದ್ದರು. ಆದರೆ, ಅವರೀಗ “ಅಮಾನತುಗೊಂಡ ಸಂಸತ್​ ಸದಸ್ಯ” ಎಂದು ಬದಲಾಯಿಸಿಕೊಂಡಿದ್ದಾರೆ.

ಶುಕ್ರವಾರ ಮೆಲ್ಮನೆಯಲ್ಲಿ ದೆಹಲಿ ಸೇವಾ ಮಸೂದೆಯ ಬಗ್ಗೆ ಚರ್ಚೆ ನಡೆಸುವಾಗ “ನಿಯಮಗಳ ಸಂಪೂರ್ಣ ಉಲ್ಲಂಘನೆಗಾಗಿ ರಾಜ್ಯಸಭೆಯಿಂದ ಚಡ್ಡಾ ಅವರನ್ನು ಅಮಾನತುಗೊಳಿಸಲಾಗಿದೆ.

Join Whatsapp