ಮೂಡಿಗೆರೆ: ಕಾರು- ಬಸ್ ಮುಖಾಮುಖಿ ಡಿಕ್ಕಿ; ತಾಯಿ- ಮಗ ಮೃತ್ಯು

Prasthutha|

ಮೂಡಿಗೆರೆ: ಕೆಎಸ್ ಆರ್ ಟಿಸಿ ಬಸ್ ಮತ್ತು ಕಾರೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಬಳಿ ವರದಿಯಾಗಿದೆ.

- Advertisement -

ಪೂಜಾ ಹಿರೇಮಠ, ರಾಜಶೇಖರ್ ಹಿರೇಮರ್ ಮೃತರು ಎಂದು ಗುರುತಿಸಲಾಗಿದೆ. ಮೃತರು ಮೂಲತಃ ಬೆಂಗಳೂರಿನ ಕೋಣನಕುಂಟೆಯವರು ಎಂದು ತಿಳಿದು ಬಂದಿದೆ.

ದುರ್ಘಟನೆಯಲ್ಲಿ ಶಿವಯಾಗಯ್ಯ ಹಿರೇಮಠ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

- Advertisement -

ಧರ್ಮಸ್ಥಳದಿಂದ ಮೂಡಿಗೆರೆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಮತ್ತು ಸಕಲೇಶಪುರದಿಂದ ಮೂಡಿಗೆರೆ ಕಡೆ ಬರುತ್ತಿದ್ದ ಸರ್ಕಾರಿ ಬಸ್ ಮುಖಾಮುಖಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

Join Whatsapp