ನವದೆಹಲಿ: ರಾಜ್ಯಸಭೆಯಿಂದ ಅಮಾನತುಗೊಂಡ ನಂತರ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಆ್ಯಪ್ ನ ತಮ್ಮ ಪ್ರೊಫೈಲ್ ಅನ್ನು ಬದಲಾಯಿಸಿದ್ದಾರೆ.
ಮುಂಚಿನ ಪ್ರೊಫೈಲ್ ನಲ್ಲಿ ಸಂಸತ್ ಸದಸ್ಯರು ಎಂದು ಉಲ್ಲೇಖಿಸಿದ್ದರು. ಆದರೆ, ಅವರೀಗ “ಅಮಾನತುಗೊಂಡ ಸಂಸತ್ ಸದಸ್ಯ” ಎಂದು ಬದಲಾಯಿಸಿಕೊಂಡಿದ್ದಾರೆ.
ಶುಕ್ರವಾರ ಮೆಲ್ಮನೆಯಲ್ಲಿ ದೆಹಲಿ ಸೇವಾ ಮಸೂದೆಯ ಬಗ್ಗೆ ಚರ್ಚೆ ನಡೆಸುವಾಗ “ನಿಯಮಗಳ ಸಂಪೂರ್ಣ ಉಲ್ಲಂಘನೆಗಾಗಿ ರಾಜ್ಯಸಭೆಯಿಂದ ಚಡ್ಡಾ ಅವರನ್ನು ಅಮಾನತುಗೊಳಿಸಲಾಗಿದೆ.