ಖ್ಯಾತ ಸೌದಿ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ: ಶಂಕಿತ ಆರೋಪಿ ಫ್ರಾನ್ಸ್ ನಲ್ಲಿ ಬಂಧನ!

Prasthutha|

ನ್ಯೂಯಾರ್ಕ್: ಸೌದಿ ಅರೇಬಿಯಾದ ಖ್ಯಾತ ಪತ್ರಕರ್ತ ಜಮಾಲ್ ಖಶೋಗಿ ಅವರ ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಯನ್ನು ಫ್ರಾನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸೌದಿ ಪ್ರಜೆ, ರಾಜಮನೆತನದ ಸದಸ್ಯ ಖಲೀದ್ ಏದ್ ಅಲ್-ಒತೈಬಿ ಎಂದು ಗುರುತಿಸಲಾಗಿದೆ ಎಂದು ಹೇಳಲಾಗಿದೆ.

- Advertisement -

ಪ್ಯಾರಿಸ್ ನಿಂದ ರಿಯಾದ್ ಗೆ ಪ್ರಯಾಣಿಸಲು ಯೋಜನೆ ರೂಪಿಸುತ್ತಿದ್ದ ವೇಳೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಫ್ರಾನ್ಸ್ ಪೊಲೀಸರು ತಿಳಿಸಿದ್ದಾರೆ.

ಖಶೋಗಿಯ ಹತ್ಯೆಯ ಆರೋಪಿಯ ಬಂಧನವನ್ನು ಆತನ ಪ್ರೇಯಸಿ ಸ್ವಾಗತಿಸಿದ್ದಾರೆ. 2018 ರ ಜಮಾಲ್ ಖಶೋಗಿ ಹತ್ಯೆಯಲ್ಲಿ ಆರೋಪಿಯ ಪಾತ್ರವನ್ನು ಬಹಿರಂಗಪಡಿಸುವುದರೊಂದಿಗೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

- Advertisement -

ಈ ನಡುವೆ ಬಂಧಿತ ವ್ಯಕ್ತಿ ನಿರಪರಾಧಿಯಾಗಿದ್ದು, ಖಶೋಗಿ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಪ್ಯಾರಿಸ್ ನಲ್ಲಿರುವ ಸೌದಿ ರಾಯಬಾರಿ ಕಚೇರಿ ಖಚಿತಪಡಿಸಿದೆ. ಮಾತ್ರವಲ್ಲ ಬಂಧಿತನನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಫ್ಯಾನ್ಸ್ ಸರ್ಕಾರವನ್ನು ಒತ್ತಾಯಿಸಿದೆ.

ಖಶೋಗಿಯ ಹತ್ಯೆಗೆ ಸಂಬಂಧಿಸಿದಂತೆ 2009 ರಲ್ಲಿ ಟರ್ಕಿ ಹೊರಡಿಸಿದ ಅರೆಸ್ಟ್ ವಾರೆಂಟ್ ನ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರನ್ನು ವಿಮರ್ಶನೆ ಮಾಡುತ್ತಿದ್ದ ಜಮಾಲ್ ಖಶೋಗಿ ಅವರನ್ನು ಅಕ್ಟೋಬರ್ 2, 2018 ರಂದು ಹತ್ಯೆ ನಡೆಸಲಾಗಿತ್ತು. ಆದರೆ ಇದುವರೆಗೂ ಖಶೋಗಿ ಅವರ ಮೃತದೇಹವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಟರ್ಕಿ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp