ಏ.ಕೆ. ಕುಕ್ಕಿಲ ಅವರ ‘ಅವಳು’ ಕೃತಿ ಬಿಡುಗಡೆಗೊಳಿಸಿದ ಸುಶೀಲಾ ಟೀಚರ್

Prasthutha|

ಮಂಗಳಪದವು: ಪತ್ರಕರ್ತ, ಬರಹಗಾರ ಏ.ಕೆ. ಕುಕ್ಕಿಲ ಅವರ ಹತ್ತನೇ ಕೃತಿ “ಅವಳು”- ಲಲಿತಪ್ರಬಂಧ ಸಂಕಲನವನ್ನು ನಿವೃತ್ತ ಶಿಕ್ಷಕಿ ಸುಶೀಲ ಟೀಚರ್  ಬಿಡುಗಡೆಗೊಳಿಸಿದರು.

ಸುಶೀಲ ಟೀಚರ್ ಅವರು ಆರು ವರ್ಷಗಳ ಹಿಂದೆ ನಿವೃತ್ತರಾಗಿದ್ದು, ಏ ಕೆ ಕುಕ್ಕಿಲ ಅವರಿಗೆ ಕೋಡಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಈ ಶಾಲೆಯಲ್ಲಿ ಒಂದನೇ ತರಗತಿಯಿಂದ 4ನೇ ತರಗತಿವರೆಗೆ ದೀರ್ಘ ಸಮಯಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಆ ಬಳಿಕ ಕೆಲಿಂಜ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವೃತ್ತಿಯಲ್ಲಿರುತ್ತಾ ನಿವೃತ್ತರಾಗಿದ್ದರು.

- Advertisement -

 ತನಗೆ ಅ ಆ ಇ ಈ ಕಲಿಸಿದ ಶಿಕ್ಷಕಿ ಸುಶೀಲಾ ಟೀಚರ್ ರ ಅಂದಿನ ದಿನಗಳನ್ನು ಸ್ಮರಿಸಿಕೊಂಡ ಲೇಖಕರು, ತಾನು ಇವತ್ತು ಈ ಹಂತಕ್ಕೆ ಬೆಳೆದಿದ್ದರೆ ಅದರಲ್ಲಿ ಟೀಚರ್ ರ ಪಾತ್ರ ಬಹುದೊಡ್ಡದು ಎಂದು ಸ್ಮರಿಸಿದರು.

ಇದೇ ವೇಳೆ,  ಶಿಷ್ಯ ನೋರ್ವ ತನ್ನ ಶಿಕ್ಷಕಿಯನ್ನು ನೆನಪಿಸಿಕೊಂಡು ಅವರ ಮನೆಗೆ ಬರುವುದು ಶಿಕ್ಷಕಿಗೆ ಕೊಡುವ ಬಹಳ ದೊಡ್ಡ ಗೌರವ. ಯಾವುದೇ ಶಿಕ್ಷಕಿಗೆ ಇಂಥ ಸಂದರ್ಭಗಳು ವಿಶೇಷ ಅಭಿಮಾನದ ಘಳಿಗೆಯಾಗಿರುತ್ತದೆ ಎಂದು ಸುಶೀಲ ಟೀಚರ್ ರ ಅಳಿಯನ ತಾಯಿ ಹೊನ್ನಮ್ಮ ಖುಷಿ ವ್ಯಕ್ತಪಡಿಸಿದರು.

ಈ ಬಿಡುಗಡೆ ಕಾರ್ಯಕ್ರಮವು ಸುಶೀಲಾ ಟೀಚರ್ ಅವರ ಕೈಂತಿಲದಲ್ಲಿರುವ ಅವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅವರ ಮಗ ಕರುಣಾಕರ ಮತ್ತು ಹೊನ್ನಮ್ಮ ಬಿಡುಗಡೆಯ ಖುಷಿಯನ್ನು ಹಂಚಿಕೊಂಡರು

ಇದೇ ವೇಳೆ, ಸುಶೀಲ ಟೀಚರ್ ರ ಮಗಳು, ಮಗಳ ಗಂಡ ದಿನೇಶ್ ಅನಂತಾಡಿ ಮತ್ತು ಮಕ್ಕಳು ಉಪಸ್ಥಿತರಿದ್ದರು.

ಪುಸ್ತಕಕ್ಕಾಗಿ 9342274331 ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -