ಕೇರಳ: ರಿಕ್ಷಾ ಚಾಲಕನಿಗೆ ಒಲಿದ 25 ಕೋಟಿ ರೂ ‘ಓಣಂ ಬಂಪರ್’ ಲಾಟರಿ

Prasthutha|

► ಲಾಟರಿಗೆ ಹಣವಿಲ್ಲ ಎಂದು ಮಗನ ಉಳಿತಾಯದ ಹುಂಡಿ ಒಡೆದಿದ್ದ ಅನೂಪ್

- Advertisement -

ತಿರುವನಂತಪುರಂ: ಈ ವರ್ಷದ ಓಣಂ ಬಂಪರ್ ಲಾಟರಿ ಇಲ್ಲಿನ ಶ್ರೀವರಾಹಂ ನಿವಾಸಿ ರಿಕ್ಷಾ ಚಾಲಕ ಅನೂಪ್‌ ಗೆ ಒಲಿದಿದೆ. ಅನೂಪ್‌ ಗೆ 25 ಕೋಟಿ ರೂ.ನ ಮೊದಲ ಬಹುಮಾನ ಬಂದಿದ್ದು, ಎಲ್ಲಾ ತೆರಿಗೆಗಳು ಕಳೆದು 15.75 ಸಿಗಲಿದೆ. ಕಳೆದ ಬಾರಿ 12 ಕೋಟಿ ರೂ ಇದ್ದ ಓಣಂ ಬಂಪರ್ ಮೊತ್ತವನ್ನು ಸರಕಾರ ಈ ಬಾರಿ 25 ಕೋಟಿಗೆ ಹೆಚ್ಚಿಸಿತ್ತು.

ರವಿವಾರ ಡ್ರಾ ಆದ ಲಾಟರಿಯನ್ನು ಅನೂಪ್ ಮುನ್ನಾದಿನ (ಶನಿವಾರ) ರಾತ್ರಿ ಖರೀದಿಸಿದ್ದ. 500 ರೂ ಮೊತ್ತದ ಲಾಟರಿಗೆ ಹಣ ಸಾಲದಾದಾಗ ತನ್ನ ಮಗನ ಉಳಿತಾಯ ಹುಂಡಿ ಒಡೆದು ಹಣದ ವ್ಯವಸ್ಥೆ ಮಾಡಿದ್ದ.

- Advertisement -

ಅಡುಗೆ ವೃತ್ತಿಯನ್ನೂ ಮಾಡಬಲ್ಲ ಅನೂಪ್ ಹೊಟೇಲ್‌ನಲ್ಲಿ ದುಡಿದೂ, ರಿಕ್ಷಾ ಓಡಿಸಿಯೂ ಕುಟುಂಬ ಸಾಕುತ್ತಿದ್ದ. ಮಲೇಷಿಯಾದ ರೆಸ್ಟೋರೆಂಟ್ ಒಂದರಲ್ಲಿ ಚೆಫ್ (ಬಾಣಸಿಗ) ಹುದ್ದೆ ದೊರೆತ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಲು ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದ ಅನೂಪ್‌ಗೆ ಬಂಪರ್ ಭಾಗ್ಯ ಒಲಿದು ಬಂದಿದೆ.

ಇದೀಗ ವಿದೇಶ ಯಾತ್ರೆಯ ಯೋಜನೆಯನ್ನು ಕೈಬಿಟ್ಟಿದ್ದು, ಮನೆಯೊಂದು ಕಟ್ಟಿ ಊರಲ್ಲೆರ ಹೊಟೇಲ್ ಉದ್ಯಮ ನಡೆಸುವುದಾಗಿ ಅನೂಪ್ ತಿಳಿಸಿದ್ದಾರೆ.

Join Whatsapp