ಸುಶಾಂತ್ ಸಿಂಗ್ ಆತ್ಮಹತ್ಯೆಯಲ್ಲ, ಕೊಲೆ !: ಸಹೋದರಿ ಸ್ಫೋಟಕ ಹೇಳಿಕೆ

Prasthutha|

ಮುಂಬೈ: ನಟ ಸುಶಾಂತ್ ಸಿಂಗ್ ಮೃತದೇಹ ಕಂಡಾಗಲೇ ಇದು ಆತ್ಮಹತ್ಯೆ ಅಲ್ಲ, ಅದು ಕೊಲೆ ಎಂದು ಗೊತ್ತಾಗಿತ್ತು ಎಂದು ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಪ್ರಿಯಾಂಕಾ ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

- Advertisement -


ವೃತ್ತಿಯಲ್ಲಿ ಲಾಯರ್ ಆಗಿರುವ ಅವರು, ತಮ್ಮ ಸಹೋದರನ ಸಾವಿನ ಬಗ್ಗೆ ಹಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ರಿಯಾ ಚಕ್ರವರ್ತಿ ಮೇಲೆ ಕೆಲವು ಆರೋಪಗಳನ್ನು ಅವರು ಹೊರಿಸಿದ್ದಾರೆ. 2020ರ ಜೂನ್ 14ರಂದು ಮುಂಬೈನ ಅಪಾರ್ಟ್ ಮೆಂಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ಆಗಿತ್ತು. ಆ ಘಟನೆಯನ್ನು ಪ್ರಿಯಾಂಕಾ ಸಿಂಗ್ ಅವರು ಮತ್ತೆ ಈಗ ನೆನಪು ಮಾಡಿಕೊಂಡಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳನ್ನು ತಿಳಿಸಿದ್ದಾರೆ.


‘ನಾನು ಕ್ರಿಮಿನಲ್ ಲಾಯರ್. ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡವರ ಅನೇಕ ಕೇಸ್ ಗಳನ್ನು ನಾನು ಕಂಡಿದ್ದೇನೆ. ಕಣ್ಣುಗಳು ಹೊರಗೆ ಬಂದಿರುತ್ತವೆ. ನಾಲಿಗೆ ಹೊರಚಾಚಿರುತ್ತದೆ. ನನ್ನ ಸಹೋದರನ ದೇಹದಲ್ಲಿ ಆ ರೀತಿ ಏನೂ ಆಗಿರಲಿಲ್ಲ. ಕೆಲವು ದಿನಗಳ ಬಳಿಕ ನಾನು ಆ ರೂಮ್ ಗೆ ಹೋಗಿ ನೋಡಿದೆ. ಬೆಡ್ ಮತ್ತು ಫ್ಯಾನ್ ನಡುವೆ ಸುಶಾಂತ್ ನ ಎತ್ತರದಷ್ಟು ಅಂತರ ಕೂಡ ಇರಲಿಲ್ಲಿ’ ಎಂದು ಪ್ರಿಯಾಂಕಾ ಸಿಂಗ್ ಹೇಳಿದ್ದಾರೆ.

- Advertisement -


‘2019ರಲ್ಲಿ ರಿಯಾ ಚಕ್ರವರ್ತಿ ಬಂದ ಬಳಿಕ ಸುಶಾಂತ್ ಜೀವನ ಹಾಳಾಗಲು ಶುರು ಆಯಿತು. ನನ್ನ ಮತ್ತು ಆತನ ನಡುವೆ ಭಿನ್ನಾಭಿಪ್ರಾಯ ಮೂಡಲು ಶುರುವಾಗಿದ್ದೇ ಆಗ. ನಂತರದ 6 ದಿನಗಳಲ್ಲಿ ಇಷ್ಟೆಲ್ಲ ಆಯಿತು. ಯಾರೋ ಬೇಕಂತಲೇ ಸುಶಾಂತ್ ಬದುಕಿನಲ್ಲಿ ರಿಯಾಳ ಎಂಟ್ರಿ ಆಗುವಂತೆ ಮಾಡಿದ್ದರು’ ಎಂದು ಹೇಳಿದರು.


ಸುಶಾಂತ್ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲಿಲ್ಲ. ಅಂತಿಮವಾಗಿ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.



Join Whatsapp