ಸುರಿಬೈಲು: ವಾಹನ ಹರಿದು ಶಾಲಾ ಬಾಲಕ ಮೃತ್ಯು

Prasthutha|

ಬಂಟ್ವಾಳ: ಶಾಲೆಯಿಂದ ಬಂದ ನಾಲ್ಕು ವರ್ಷದ ಬಾಲಕ ಮನೆಯಂಗಳದಲ್ಲಿ ವಾಹನದಿಂದ ಇಳಿದು ಮನೆಗೆ ತೆರಳಬೇಕು ಎನ್ನುವಷ್ಟರಲ್ಲಿ ಚಾಲಕ ವಾಹನ ಚಲಾಯಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಂಟ್ವಾಳದ ಸುರಿಬೈಲು ಎಂಬಲ್ಲಿ ಶುಕ್ರವಾರ ನಡೆದಿದೆ.

- Advertisement -

ಸುರಿಬೈಲು ಕೆಕೆ ಕಲಂದರ್ ಅಲಿ ಹಿಮಮಿ ಸಖಾಫಿ ಅವರ ಪುತ್ರ ಅಬ್ದುಲ್ ಖಾದರ್ ಹಾದಿ (4) ಮೃತ ಬಾಲಕ. ಈತ ದಾರುಲ್ ಅಶ್ ಅರಿಯ್ಯ ಆಂಗ್ಲ ಮಾಧ್ಯಮ ಶಾಲೆಯ ಎಲ್ ಕೆಜಿ ವಿದ್ಯಾರ್ಥಿ. ಶುಕ್ರವಾರ ಮಧ್ಯಾಹ್ನ ಶಾಲೆಯಿಂದ ಇಕೋ ಕಾರಿನಲ್ಲಿ ಚಾಲಕ ಕರೆದುಕೊಂಡು ಕಾಡಂಗಡಿಯಲ್ಲಿರುವ ಮನೆಗೆ ಬಂದು ಮಗುವನ್ನು ವಾಹನದಿಂದ ಇಳಿಸಿದ್ದಾನೆ. ಕಾರಿನಿಂದ ಇಳಿದ ಮಗು ಮನೆಗೆ ಹೋಗಿದೆ ಎಂದು ಭಾವಿಸಿದ ಚಾಲಕ ವಾಹನ ಚಲಾಯಿಸಿದ್ದು, ಮಗು ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದೆ.

ಕಣ್ಣೆದುರೇ ಮಗುವನ್ನು ಕಳೆದುಕೊಂಡ ಪೋಷಕರ ರೋದನ ಹೃದಯ ಕಲಕುವಂತಿತ್ತು. ಮೃತದೇಹವನ್ನು ತುಂಬೆ ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Join Whatsapp