ಸುರತ್ಕಲ್ ಟೋಲ್’ಗೇಟ್ ವಿರೋಧಿ ಪ್ರತಿಭಟನೆ: 15 ದಿನದ ಧರಣಿಯ ನೇತೃತ್ವ ವಹಿಸಿದ ಅಡ್ಡೂರು, ಬಜ್ಪೆ ಗ್ರಾಮಸ್ಥರು

Prasthutha|

ಮಂಗಳೂರು: ಸುರತ್ಕಲ್’ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಟೋಲ್’ಗೇಟ್ ಅನ್ನು ತೆರವುಗೊಳಿಸುವಂತೆ ಆಗ್ರಹಿಸಿ ಟೋಲ್’ಗೇಟ್ ವಿರೋಧಿ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 15ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರದ ಅಡ್ಡೂರು ಮತ್ತು ಬಜ್ಪೆಯ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.

- Advertisement -

ಸುರತ್ಕಲ್’ನಲ್ಲಿ ನಿರ್ಮಿಸಲಾಗಿರುವ ಅಕ್ರಮ ಟೋಲ್’ಗೇಟ್ ಅನ್ನು ಜಿಲ್ಲಾಡಳಿತ ತೆರವುಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 15ನೇ ಕಾಲಿಟ್ಟಿದ್ದು, ಇಂದಿನ ಧರಣಿಗೆ ಅಡ್ಡೂರು ಮತ್ತು ಬಜ್ಪೆಯ ಗ್ರಾಮಸ್ಥರು ಭಾಗವಹಿಸಿ ಟೋಲ್’ಗೇಟ್ ಹೋರಾಟ ಸಮಿತಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಐವನ್ ಡಿಸೋಜ, ಸುರತ್ಕಲ್ ಮಾಜಿ ಶಾಸಕ ಮೊಯ್ದಿನ್ ಬಾವಾ ಸೇರಿದಂತೆ ಹಲವು ರಾಜಕೀಯ ನೇತಾರರು, ಸಾಮಾಜಿಕ ಹೋರಾಟಗಾರರು ಮತ್ತು ಹಿರಿಯರು ಭಾಗವಹಿಸಿದ್ದರು.

Join Whatsapp