ಸುರತ್ಕಲ್: ಬದ್ರಿಯಾ ಹೆಲ್ತ್ ಲೀಗ್ , ಹ್ಯೂಮಾನಿಟಿ ಚಾರಿಟೆಬಲ್ ಟ್ರಸ್ಟ್ ನಿಂದ ಆಂಬುಲೆನ್ಸ್ ಲೋಕಾರ್ಪಣೆ

Prasthutha|

- Advertisement -

ಮಂಗಳೂರು: ಸುರತ್ಕಲ್ ನ ಬದ್ರಿಯಾ ಹೆಲ್ತ್ ಲೀಗ್  ಹಾಗೂ ಹ್ಯೂಮಾನಿಟಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಎಸ್.ಮುಹಮ್ಮದ್, ಮುಹಮ್ಮದ್ ನಜೀಬ್ ಸುರತ್ಕಲ್ ಸ್ಮರಣಾರ್ಥ ನೂತನ ಅಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ಸುರತ್ಕಲ್ ನ ಬದ್ರಿಯಾ ಹೆಲ್ತ್ ಲೀಗ್ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಹಾಗೂ ಬದ್ರಿಯಾ ಹೆಲ್ತ್ ಲೀಗ್ ನ ಅಧ್ಯಕ್ಷ ಜೀಶನ್ ಅಲಿ ಐ.ಎಂ.ವಹಿಸಿದ್ದರು. ಸುರತ್ಕಲ್ ಎಂಜೆಎಂ ಖತೀಬ್ ಹಾಫಿಲ್ ಜಿ.ಎಂ.ಸುಲೈಮಾನ್ ಹನೀಫಿ ಕಾರ್ಯಕ್ರಮ ಉದ್ಘಾಟಿಸಿದರು.

- Advertisement -

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಮಾತನಾಡಿ, ಸಾರ್ವಜನಿಕರ ಉಪಯೋಗಕ್ಕಾಗಿ ಆಂಬುಲೆನ್ಸ್  ಲೋಕಾರ್ಪಣೆ ಮಾಡಿರುವುದು ಸಂತಸದ ವಿಚಾರ. ಸಹೃದಯ ದಾನಿಗಳಿಂದ ಹಣ ಸಂಗ್ರಹಿಸಿ ಆಂಬುಲೆನ್ಸ್ ಒದಗಿಸಲಾಗಿದೆ. ಇದರಿಂದ ಈ ಪ್ರದೇಶದ ರೋಗಿಗಳನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಲು ಸಹಾಯವಾಗಲಿದೆ ಎಂದರು.

ಸುರತ್ಕಲ್ ಬಿಎಚ್ ಎಲ್ ಸ್ಥಾಪಕ ಅಧ್ಯಕ್ಷ ಐ.ಯಾಕೂಬ್, ಪಣಂಬೂರು ಎಸಿಪಿ ಮಹೇಶ್ ಕುಮಾರ್,ಎಂಜೆಎಂ ಅಧ್ಯಕ್ಷ ಅಬ್ದುಲ್ ಅಝೀಝ್, ದ.ಕ.ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಅಧ್ಯಕ್ಷ ಸುಖಪಾಲ್ ಸಾಲ್ಯಾನ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ನಯನಾ ಕೋಟ್ಯಾನ್, ಡಿವೈಎಫ್ ಐ ದ.ಕ.ಜಿಲ್ಲಾಧ್ಯಕ್ಷ ಇಮ್ತಿಯಾಝ್, ಇಡ್ಯ ಖಿಲಿರಿಯಾ ಮದರಸ ಅಧ್ಯಕ್ಷ ಇಲ್ಯಾಸ್, ಮುಖಂಡರಾದ ರಾಘವೇಂದ್ರ ರಾವ್, ಝುಲ್ಫಿಕರ್ ಅಲಿ, ಎಸ್.ಕೆ.ಮುಸ್ತಫಾ ಮತ್ತಿತರರು ಭಾಗವಹಿಸಿದ್ದರು.

Join Whatsapp