ಮಂಗಳೂರು: ಕೃಷ್ಣಾಪುರದಲ್ಲಿ ಶನಿವಾರ ರಾತ್ರಿ ನಡೆದ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಟಿಪಳ್ಳ 4ನೇ ಬ್ಲಾಕ್ ನಿವಾಸಿ ಲಕ್ಷ್ಮೀಶ ದೇವಾಡಿಗ (28) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ಶನಿವಾರ ರಾತ್ರಿ ನಡೆದ ಅಬ್ದುಲ್ ಜಲೀಲ್ (43) ಅವರಿಗೆ ಚೂರಿ ಇರಿದು ಹತ್ಯೆ ಮಾಡಲಾಗಿತ್ತು. ಹತ್ಯೆ ಸಂಬಂಧ ಸುವಿನ್ ಕಾಂಚನ್ ಯಾನೆ ಮುನ್ನಾ (25) ಮತ್ತು ಶೈಲೇಶ್ ಪೂಜಾರಿ (20), ಪವನ್ ನನ್ನು ಪೊಲೀಸರು ಸೋಮವಾರ ಬಂಧಿಸಿದ್ದರು.
ಶೈಲೇಶ್ ಪೂಜಾರಿ ಸುರತ್ಕಲ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಹಲವು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ಸುವಿನ್ ಕಾಂಚನ್ ಮೂಲ್ಕಿ ಮತ್ತು ಸುರತ್ಕಲ್ ಠಾಣೆಯಲ್ಲಿ ರೌಡಿ ಶೀಟರ್, ಈತನ ವಿರುದ್ಧ ಮೂಲ್ಕಿ ಮೈಸೂರು, ಪಡುಬಿದ್ರೆ, ಸುರತ್ಕಲ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಆರೋಪಿಗಳು ಕೃತ್ಯವೆಸಗಿ ಮುಂಬೈಗೆ ಪರಾರಿಯಾಗಲು ಸಂಚು ಹೂಡಿದ್ದರು. ಈ ವೇಳೆ, ಕಾಪು ಬಳಿಯ ಲಾಡ್ಜ್ ನಲ್ಲಿದ್ದಾಗಲೇ ಪೊಲೀಸರು ಬಂಧಿಸಿದ್ದರು.