ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್ ರದ್ದುಗೊಳಿಸಿದ ಚೀನಾ

Prasthutha|

ಬೀಜಿಂಗ್: ಶೂನ್ಯ ಕೋವಿಡ್ ನಿಯಮದ ವಿರುದ್ಧ ಸಾರ್ವಜನಿಕರ ಪ್ರತಿಭಟನೆ ಹಿನ್ನೆಲೆ ತನ್ನ ನೀತಿಯಲ್ಲಿ ಬದಲಾವಣೆಗೆ ಮುಂದಾಗಿರುವ ಚೀನಾ, ಜನವರಿ 8ರಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದೆ.

- Advertisement -

ಕೋವಿಡ್ ನಿರ್ವಹಣಾ ಮಾರ್ಗಸೂಚಿಯನ್ನು ಮುಂದಿನ ತಿಂಗಳಿಂದ ‘ಕ್ಲಾಸ್–ಎ ನಿಂದ ಕ್ಲಾಸ್–ಬಿ’ಗೆ ಇಳಿಕೆ ಮಾಡಲಾಗುತ್ತದೆ. ಇದೇ ವಿಭಾಗದಲ್ಲಿ ಕಡಿಮೆ ತೀವ್ರತೆ ಇರುವ ರೋಗಗಳನ್ನು ಸೇರಿಸಲಾಗುತ್ತದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ(ಎನ್’ಎಚ್’ಸಿ) ಹೇಳಿದೆ.

ಜ.08, 2023 ರಿಂದ ಚೀನಾ ವಿದೇಶದಿಂದ ತನ್ನ ನೆಲಕ್ಕೆ ಆಗಮಿಸುವವರಿಗೆ ಇನ್ ಬೌಂಡ್ ಕ್ವಾರಂಟೈನನ್ನು ರದ್ದುಗೊಳಿಸಲಿದೆ. ಹಳೇಯ ನಿಯಮಗಳ ಪ್ರಕಾರ, ವಿದೇಶದಿಂದ ಚೀನಾಗೆ ಆಗಮಿಸುವವರು ಕಡ್ಡಾಯವಾಗಿ 2 ವಾರಗಳ ಕ್ವಾರಂಟೈನ್’ಗೆ ಒಳಪಡಬೇಕಿತ್ತು. ಕ್ರಮೇಣ ಇದನ್ನು ಮೂರು ದಿನಗಳ ನಿಗಾದೊಂದಿಗೆ ಒಟ್ಟು 5 ದಿನಗಳಿಗೆ ಏರಿಕೆ ಮಾಡಲಾಗಿತ್ತು.

- Advertisement -

ಕೊರೊನಾದ ಹೊಸ ರೂಪಾಂತರ ತಳಿ ಬಿಎಫ್–7ನಿಂದ ಚೀನಾದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಿರುವ ಹೊತ್ತಿನಲ್ಲೇ ಚೀನಾ ಅಂತಾರಾಷ್ಟ್ರೀಯ ಪ್ರಯಾಣಿಕರ ಕ್ವಾರಂಟೈನ್ ನಿಯಮ ತೆರವಿಗೆ ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ಆರೋಗ್ಯ ಇಲಾಖೆ ಅಧಿಕಾರಿಗಳು, ಓಮೈಕ್ರಾನ್’ನ ಬಿಎಫ್–7, ಡೆಲ್ಟಾದಷ್ಟು ಮಾರಕವಲ್ಲ ಎಂದು ಹೇಳಿದ್ದಾರೆ.

Join Whatsapp