ಪೆಗಾಸಸ್ ಪ್ರಕರಣ: ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ, ತಜ್ಞರ ಸಮಿತಿ ರಚನೆ

Prasthutha|

ನವದೆಹಲಿ: ಪೆಗಾಸಸ್ ಪ್ರಕರಣದ ತನಿಖೆಯನ್ನು ತನ್ನ ಮೇಲ್ವಿಚಾರಣೆಯಲ್ಲಿ ನಡೆಸಲು ನಿರ್ಧರಿಸಿರುವ ಸುಪ್ರೀಂಕೋರ್ಟ್, ಈ ಸಂಬಂಧ ತಜ್ಞರ ಸಮಿತಿ ರಚಿಸಿದೆ. ಪ್ರಕರಣದ ತನಿಖೆ ನಡೆಸಲು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ಮಹತ್ವದ ಆದೇಶ ನೀಡಿದ್ದು, ಇದಕ್ಕಾಗಿ ತಜ್ಞರ ಸಮಿತಿ ರಚಿಸಿದೆ.

- Advertisement -


ಪ್ರತಿಯೊಬ್ಬ ಭಾರತೀಯನೂ ತನ್ನ ಖಾಸಗಿತನದ ಹಕ್ಕನ್ನು ಕಸಿಯುವಂತಿಲ್ಲ. ಇದರಿಂದ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಎನ್.ವಿ.ರಮಣ, ತಜ್ಞರ ಸಮಿತಿ ರಚಿಸಲು ಆದೇಶಿಸಿದರು.
ಇಸ್ರೇಲ್ನ ಬೇಹುಗಾರಿಕೆ ಕುತಂತ್ರಾಂಶ ಪೆಗಾಸಸ್ ಬಳಸಿ ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಮುಂತಾದವರ ಮೇಲೆ ಗೂಢಚರ್ಯೆ ನಡೆಸಲಾಗಿದೆ ಎನ್ನಲಾಗಿದೆ.

ರಾಷ್ಟ್ರೀಯ ಭದ್ರತೆಯ ಕಳಕಳಿಯನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರವು ನುಣಿಚಿಕೊಳ್ಳಲಾಗದು. ನ್ಯಾಯಿಕ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲಾಗದು. ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಬೇಕಿತ್ತು ಎಂದು ಪೀಠ ಹೇಳಿತು.

- Advertisement -

ತಜ್ಞ ಪರಿಣತರ ಸ್ವತಂತ್ರ ತ್ರಿಸದಸ್ಯ ತನಿಖಾ ಸಮಿತಿ ರಚನೆ ಮಾಡಲಾಗಿದ್ದು, ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾ. ಆರ್ ವಿ ರವೀಂದ್ರನ್‌ ಅವರು ನೇತೃತ್ವ ವಹಿಸಿದ್ದಾರೆ. ಅಲೋಕ್‌ ಜೋಷಿ ಕೂಡ ಈ ಸಮಿತಿಯಲ್ಲಿ ಇರುತ್ತಾರೆ.  ಪೆಗಸಸ್‌ ಹಗರಣದ ತನಿಖೆಯ ಉಸ್ತುವಾರಿಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರವೀಂದ್ರನ್ ವಹಿಸಲಿದ್ದಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಸಮಿತಿಯ ಇತರೆ ಸದಸ್ಯರು: ನಿವೃತ್ತ ಐಪಿಎಸ್ ಅಧಿಕಾರಿ ಅಲೋಕ್ ಜೋಷಿ (1976ನೇ ಬ್ಯಾಚ್), ಡಾ. ಸುಂದೀಪ್ ಓಬೆರಾಯ್, ಅಧ್ಯಕ್ಷರು, ಇಂಟರ್ ನ್ಯಾಷನಲ್  ಆರ್ಗನೈಸೇಷನ್ ಆಫ್ ಸ್ಟಾಂಡರ್ಡೈಸೇಷನ್/ಇಂಟರ್ನ್ಯಾಷನಲ್ ಎಲೆಕ್ಟ್ರೊ-ಟೆಕ್ನಿಕಲ್ ಕಮಿಷನ್/ಜಾಯಿಂಟ್ ಟೆಕ್ನಿಕಲ್.

ಬೇಹುಗಾರಿಕೆ ನಡೆಸಿದ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಹಲವು ಅರ್ಜಿಗಳು ಕಾಯ್ದಿರಿಸಿತ್ತು . ಸಲ್ಲಿಕೆ ಆಗಿದ್ದವು. ಆರೋಪಗಳ ಬಗ್ಗೆ ಪರಿಶೀಲನೆ ನಡೆಸುವುದಕ್ಕೆ ತಜ್ಞರ ತಂಡ ರಚಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರವು ಮುಂದಿಟ್ಟಿತ್ತು. ಈ ತಂಡದ ಮುಂದೆ ವಿವರಗಳನ್ನು ಬಹಿರಂಗಪಡಿಸುವುದಾಗಿಯೂ ಹೇಳಿತ್ತು. ಪೆಗಾಸಸ್ ಕುತಂತ್ರಾಂಶ ಬಳಸಿ 50 ಸಾವಿರಕ್ಕೂ ಹೆಚ್ಚು ಜನರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಸುದ್ದಿಯನ್ನು ಅಂತಾರಾಷ್ಟ್ರೀಯ ತನಿಖಾ ಪತ್ರಿಕೋದ್ಯಮ ಕೂಟವು ಜುಲೈ 18 ರಂದು ಬಹಿರಂಗಪಡಿಸಿತ್ತು.



Join Whatsapp