ಹಾವೇರಿ: ಸಿಂದಗಿ ಹಾಗೂ ಹಾನಗಲ್ ಉಪಚುನಾವಣಾ ಕಣ ರಂಗೇರಿದ್ದು, ರಾಜಕೀಯ ನಾಯಕರ ವಾಕ್ಸಮರ ಮುಂದುವರಿದಿದೆ. ಉಪಚುನಾವಣೆಯ ಪ್ರಚಾರದ ಭರದಲ್ಲಿ ಶಾಸಕ ಜಮೀರ್ ಅವರು ಬಿಜೆಪಿ ವಿರುದ್ಧ ಅವಾಚ್ಯ ಪದ ಬಳಸಿದ್ದರು. ಆದರೆ ಸಂಜೆ ವೇಳೆ ತಮ್ಮ ತಪ್ಪನ್ನು ಅರಿತು ಬಿಜೆಪಿಗೆ ಕ್ಷಮೆ ಕೇಳಿದ್ದಾರೆ.
ಇಲ್ಲಿಯವರೆಗೆ ಬಿಜೆಪಿಯವರು ನಾವು ಇಂತಹ ಕೆಲಸ ಮಾಡಿದ್ದೇವೆ ನಮಗೆ ವೋಟು ಕೊಡಿ ಎಂದು ಕೇಳಲಿಲ್ಲ. ಬದಲಾಗಿ ಬರೀ ಜಾತಿ, ಹಿಂದೂ, ಮುಸ್ಲಿಂ ಅಂತ ಮು… ಬರೀ ಅದೇ ಎಂದು ಆಕ್ರೋಶದ ಧ್ವನಿಯಲ್ಲಿ ಹೇಳಿದ್ದರು.
ಇದಾದ ಬಳಿಕ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊತ್ತಿಲ್ಲ. ಮಾತಿನ ಭರದಲ್ಲಿ ಹೇಳಿರಬಹುದು. ನಾನು ಆ ಪದ ಬಳಕೆ ಮಾಡಿದ್ದರೆ ಕ್ಷಮೆ ಕೇಳುತ್ತೇನೆ. ರಾಜಕಾರಣಿಗಳು ಅಂತಹ ಪದವನ್ನು ಉಪಯೋಗಿಸಬಾರದು. ನಾನು ಮಾತಿನ ಭರದಲ್ಲಿ ಅದು ಹೇಳಿರಬಹುದು. ನನಗೆ ಗೊತ್ತಿಲ್ಲ, ನೀವು ಹೇಳಿದ ನಂತರವೇ ನನಗೆ ಗೊತ್ತಾಗಿದೆ. ಒಂದು ವೇಳೆ ಆ ರೀತಿ ನಾನು ಹೇಳಿದ್ದರೆ ಬಿಜೆಪಿ ಜೊತೆ ಕ್ಷಮೆ ಕೇಳುತ್ತೇನೆ ಎಂದು ಜಮೀರ್ ಹೇಳಿದರು.