ಬಾಬಾಬುಡನ್ ಗಿರಿ ವಿವಾದ: ಸುಪ್ರೀಂ ತೀರ್ಪು ಸಂಘಪರಿವಾರಕ್ಕೆ ಸಂದ ಜಯ- ರವಿಕುಮಾರ್

Prasthutha|

ಬೆಂಗಳೂರು: ಇಂದು ಚಿಕ್ಕಮಗಳೂರು ದತ್ತಪೀಠಕ್ಕೆ ಸಂಬಂಧಿಸಿದ ಐತಿಹಾಸಿಕ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ದತ್ತಪೀಠ ಹಿಂದೂಗಳಿಗೆ ಸೇರಿದ್ದು ಎಂದು ಕೋರ್ಟ್ ಇಂದು ತೀರ್ಪು ನೀಡಿದೆ. ಇದು ಸಂಘಪರಿವಾರಕ್ಕೆ ಸಂದ ಜಯ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ.ಹಿ ಪರಿಷತ್, RSS, BJP ಸೇರಿದಂತೆ ಬಹಳಷ್ಟು ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿತ್ತು. 2018-19ರಲ್ಲಿ ಮೌಲ್ವಿಗಳನ್ನು ಪೂಜೆ ಮಾಡಲು ನೇಮಿಸಲಾಗಿತ್ತು. ವಿ.ಹಿಂ ಪರಿಷತ್ ದೂರು ನೀಡಿ ಕೋರ್ಟ್ ಮೊರೆ ಹೋಗಿತ್ತು. ನೂರಾರು ಕೇಸ್ ದಾಖಲಿಸಿದ್ದ ಕಾಂಗ್ರೆಸ್ ಸರ್ಕಾರ ನಮ್ಮ ಕಾರ್ಯಕರ್ತರನ್ನು ಬಂಧಿಸಿತ್ತು. ಹೋರಾಟ ಹತ್ತಿಕ್ಕಿ, ಸದೆ ಬಡಿಯುವ ತೀರ್ಮಾನ ಮಾಡಿತ್ತು. ಬಾಬಾ ಬುಡನ್ ಗಿರಿ ಎಂದು ಹೇಳುವ ಮೂಲಕ ಹಿಂದೂಗಳ ಭಾವನೆ ವಿರುದ್ಧ ನಡೆದುಕೊಂಡಿತ್ತು. ಆದರೆ ಇಂದು ಸುಪ್ರೀಂ ಕೋರ್ಟ್ ಹಿಂದೂಗಳ ಪರವಾಗಿ ತೀರ್ಪು ನೀಡಿದೆ ಎಂದು ರವಿಕುಮಾರ್ ತಿಳಿಸಿದರು.
ಇದು ಹಿಂದೂಗಳ ಶ್ರದ್ಧಾ, ಭಕ್ತಿಯನ್ನು ಎತ್ತಿ ಹಿಡಿದಿದೆ. ಇದು ಹಿಂದೂಗಳಿಗೆ ಸಿಕ್ಕ ದೊಡ್ಡ ಜಯ. ಇದಕ್ಕೆ ನಾವು ಕೋರ್ಟಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ರವಿಕುಮಾರ್ ಹೇಳಿದರು.

ಎರಡೂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಎರಡೂ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಅಡ್ರಸ್ ಇಲ್ಲದಂತೆ ಹೋಗಲಿದೆ. ಯಡಿಯೂರಪ್ಪ, ಬೊಮ್ಮಾಯಿ, ಕಟೀಲ್ ಎಲ್ಲರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ನಮ್ಮಲ್ಲಿ ಡಜನ್ ಗಟ್ಟಲೆ ನಾಯಕರಿದ್ದಾರೆ. ನಿಮಗೆ ತಾಕತ್ತು ಇದ್ದರೆ, ಸಿಎಂ ಅಭ್ಯರ್ಥಿ ಯಾರು ಎಂದು ಘೋಷಿಸಿ ಎಂದು ಸವಾಲು ಹಾಕಿದರು.

Join Whatsapp