ಫತ್ವಾ ನಿಷೇಧ ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ

Prasthutha|

ಡೆಹ್ರಾಡೂನ್: ಫತ್ವಾ, ಸ್ಥಳೀಯ ಪಂಚಾಯತ್ ನ್ಯಾಯ ಮತ್ತು ಆ ಮಾದರಿಯ ಕಟ್ಟಳೆಗಳನ್ನು ನಿಷೇಧಿಸುವ ಉತ್ತರಾಖಂಡದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಜಸ್ಟಿಸ್’ಗಳಾದ ಅಜಯ್ ರಸ್ಟೋಗಿ ಮತ್ತು ಬೇಲಾ ಎಂ. ತ್ರಿವೇದಿಯವರ ನೇತೃತ್ವದ ನ್ಯಾಯ ಪೀಠವು, 2018ರಲ್ಲಿ ಜಮಾಯತ್ ಉಲಮಾ ಇ ಹಿಂದ್ ಸಲ್ಲಿಸಿದ ಅರ್ಜಿಯ ಮೇಲೆ ತಡೆಯಾಜ್ಞೆ ನೀಡಿ ಉತ್ತರಾಖಂಡ ಹೈಕೋರ್ಟ್’ನ ಆದೇಶವನ್ನು ಎತ್ತಿ ಹಿಡಿಯಿತು.

- Advertisement -


ಫತ್ವಾ ಎನ್ನುವುದು ಸಂವಿಧಾನ ಬಾಹಿರವಾದ ಸಾಹಸಕ್ಕೆ ಕರೆ. ಹಳ್ಳಿ ಪಂಚಾಯತುಗಳು ಅತ್ಯಾಚಾರಿಯ ಪರ ನಿಲ್ಲುವುದು ಕೂಡ ಹಳ್ಳಿಗಳ ಹೇಯವಾದ ನಡೆಯಾಗಿದೆ ಎಂದು ಕೋರ್ಟ್ ಹೇಳಿತು.
ವಿಶ್ವಲೋಚನ ಮದನ್ ವರ್ಸಸ್ ಭಾರತೀಯ ಒಕ್ಕೂಟ ಮತ್ತಿತರರ ಈ ಪ್ರಕರಣದ ಫತ್ವಾ ಸಮರ್ಥನೀಯವಲ್ಲ ಎಂಬ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಸುಪ್ರೀಂ ಅದನ್ನು ಎತ್ತಿ ಹಿಡಿಯಿತು.
ಅರ್ಜಿಯಲ್ಲಿ ಉಚ್ಚ ನ್ಯಾಯಾಲಯವು ಫರ್ಮಾನ್ ಬಗ್ಗೆ ಹೇಳಲಾಗಿದೆಯೇ ಹೊರತು ಫತ್ವಾ ಬಗೆಗಲ್ಲ ಎಂದೂ ವಾದಿಸಲಾಗಿತ್ತು. ದಾರುಲ್ ಇಫ್ತಾಗಳ ಮುಫ್ತಿಗಳು ಮಾತ್ರ ಫತ್ವಾ ಹೊರಡಿಸಬಹುದೇ ಹೊರತು ಇತರರಲ್ಲ ಎಂಬುದನ್ನೂ ಹೈಕೋರ್ಟ್ ಗಮನಿಸಿಲ್ಲ ಎಂದೂ ಅರ್ಜಿಯಲ್ಲಿ ಹೇಳಲಾಗಿತ್ತು.


“ಉತ್ತಮ ಜ್ಞಾನಿ ವಿದ್ವಾಂಸ ಮಾತ್ರ ಫತ್ವಾ ಹೊರಡಿಸಬಹುದು. ಶರಿಯತ್ ಕಾನೂನಿನ ಪ್ರಕಾರ ಸೂಕ್ತ ವಿದ್ವಾಂಸರಾದ ಮುಫ್ತಿಗಳು ನ್ಯಾಯಾಧೀಶರಾಗಿ ತೀರ್ಪು ನೀಡುತ್ತಾರೆ. ಯಾವುದರ ಪರವೂ ವಾಲಿರದೆ ಮನವಿಯ ಮೇಲೆ ತಜ್ಞ ಮುಫ್ತಿಗಳು ಫತ್ವಾ ಎನ್ನುವ ಅಭಿಪ್ರಾಯವನ್ನು ನೀಡುವುದು ಇಸ್ಲಾಮಿಕ್ ಕಾನೂನು ಆಗಿದೆ. ಇದನ್ನು ಕಾನೂನಾತ್ಮಕವಾಗಿಯೇ ನಿರ್ವಹಿಸಲಾಗುತ್ತದೆ. ಒಬ್ಬರು ಮುಫ್ತಿ ಆಗಲು ಎಂಟರಿಂದ 10 ವರ್ಷಗಳ ಕಾಲ ಇಸ್ಲಾಮಿಕ್ ನ್ಯಾಯ ವಿಧಿಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ.” ಎಂದೂ ಅರ್ಜಿಯಲ್ಲಿ ವಾದಿಸಲಾಗಿತ್ತು.
ಉಚ್ಚ ನ್ಯಾಯಾಲಯದ ತೀರ್ಪು ಒಂದು ಸಮುದಾಯಕ್ಕೆ ನಷ್ಟವಾಗಿದೆ. ಕೆಲವೊಮ್ಮೆ ಫತ್ವಾ ತೀರ್ಪು ನೀಡಲೇ ಬೇಕಾಗುತ್ತದೆ ಎಂದೂ ವಾದಿಸಲಾಗಿತ್ತು.

Join Whatsapp