ಉರಿಗೌಡ, ನಂಜೇಗೌಡ ಫ್ಲೆಕ್ಸ್ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆ ಅನುಚಿತ: ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಸಂದರ್ಭದಲ್ಲಿ ಅಲ್ಲಿನ ಜನತೆ ನೀಡಿದ ಅಭೂತಪೂರ್ವ ಸ್ವಾಗತ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಈ ಕಾರಣದಿಂದಲೇ ಹತಾಶರಾದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರವರು, ಟಿಪ್ಪು ಸುಲ್ತಾನ್ ಸಾವಿಗೆ ಕಾರಣರಾದರೆನ್ನಲಾದ ಉರಿಗೌಡ ಹಾಗೂ ನಂಜೇಗೌಡರನ್ನು ಬೆಂಬಲಿಸಿ ಹಾಕಿದ ಫ್ಲೆಕ್ಸ್ ಅನ್ನು ಉಲ್ಲೇಖಿಸಿ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರನ್ನು ನಿಂದಿಸಿರುವುದು ಖಂಡನೀಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ.

- Advertisement -


ರಾಜ್ಯ ಪೊಲೀಸ್ ಮುಖ್ಯಸ್ಥರ ಮೇಲೆ ವಿನಾ ಕಾರಣ ಆಪಾದನೆ ಮಾಡಿ ಪೊಲೀಸರ ನೈತಿಕ ಸ್ಥೈರ್ಯ ಕುಂದಿಸುವ ಪ್ರಯತ್ನವನ್ನು ಕೆಪಿಸಿಸಿ ಅಧ್ಯಕ್ಷರು ಮಾಡಿದ್ದಾರೆ. ತಮ್ಮ ಸ್ವಾರ್ಥ ರಾಜಕಾರಣ ಸಾಧಿಸಲು ಸರಕಾರದ ಅಧಿಕಾರಿಗಳನ್ನು ಗುರಿ ಮಾಡುವುದು ಸರಿಯಲ್ಲ. ಅಧಿಕಾರಕ್ಕೆ ಬರುವ ಯಾವುದೇ ಗ್ಯಾರಂಟಿ ಇರದ, ಕಾಂಗ್ರೆಸ್ ನಾಯಕರು ಟಿಪ್ಪುವಿನ ಬಗ್ಗೆ ಕಾಳಜಿ ತೋರಿಸಿ, ಉರಿಗೌಡರ ಬಗ್ಗೆ ದ್ವೇಷ ಸಾರುವ, ಅವರ ಪಕ್ಷದ ನೀತಿಗೆ, ಅನುಗುಣವಾಗಿಯೇ ಇದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

Join Whatsapp