ಮುಸ್ಲಿಮರಿಂದ ಹಿಂದೂಗಳ ಮತಾಂತರದ ಆರೋಪ : ಮಾಧ್ಯಮ ವರದಿ ಆಧರಿಸಿದ ಅರ್ಜಿ ನಿರಾಕರಿಸಿದ ಸುಪ್ರೀಂ ಕೋರ್ಟ್‌

Prasthutha|

ನವದೆಹಲಿ : ಹರ್ಯಾಣದ ಮೇವತ್‌ ನಲ್ಲಿ ಮುಸ್ಲಿಮರು ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಆಪಾದಿಸಿದ ಪಿಐಎಲ್‌ ಒಂದನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

- Advertisement -

ಸಿಜೆಐ ರಮಣ, ನ್ಯಾ. ಎ.ಎಸ್.‌ ಬೋಪಣ್ಣ, ನ್ಯಾ. ಹೃಷಿಕೇಶ್‌ ರಾಯ್‌ ನ್ಯಾಯಪೀಠ ಈ ಆದೇಶ ಜಾರಿಗೊಳಿಸಿದೆ. ಕೇವಲ ಸುದ್ದಿ ಪತ್ರಿಕೆಗಳ ವರದಿಗಳನ್ನು ಆಧರಿಸಿ ಕೋರ್ಟ್‌ ವಿಷಯ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್‌ ತಿಳಿಸಿದೆ.

“ಕ್ಷಮಿಸಿ, ಸುದ್ದಿ ಪತ್ರಿಕೆಗಳ ವರದಿಗಳ ಆಧಾರದಲ್ಲಿ ನಾವು ಇದನ್ನು ಕೈಗೆತ್ತಿಕೊಳ್ಳಬಹುದು ಎಂಬುದು ನಮಗನಿಸುತ್ತಿಲ್ಲ” ಎಂದು ಸಿಜೆಐ ರಮಣ ಹೇಳಿದ್ದಾರೆ.

- Advertisement -

ಹಿಂದೂಗಳ ಜೀವನ ಮತ್ತು ಸ್ವಾತಂತ್ರ್ಯ ಸಂಕಷ್ಟಕ್ಕೆ ಸಿಲುಕಿದ್ದು, ಸ್ಥಳೀಯ ಪೊಲೀಸರು ಅಧಿಕಾರವನ್ನು ಚಲಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಈ ಸಂಬಂಧ ಅರ್ಜಿ ಸಲ್ಲಿಸಿರುವ ನ್ಯಾಯವಾದಿ ವಿಷ್ಣು ಶಂಕರ್‌ ಜೈನ್‌ ಆಪಾದಿಸಿದ್ದರು. ಹಿಂದೂಗಳ ಮತಾಂತರ ಕುರಿತ ಆರೋಪಗಳನ್ನು ತನಿಖೆಗೊಳಪಡಿಸುವಂತೆ ಅವರು ಅರ್ಜಿಯಲ್ಲಿ ವಿನಂತಿಸಿದ್ದರು.



Join Whatsapp