ಧರ್ಮ ಸಂಸದ್’ನಲ್ಲಿ ದ್ವೇಷ ಭಾಷಣ ಮಾಡಲಾಗಿಲ್ಲ ಎಂಬ ದೆಹಲಿ ಪೊಲೀಸರ ನಿಲುವಿಗೆ ಸುಪ್ರೀಮ್ ಕೋರ್ಟ್ ಅಸಮಾಧಾನ

Prasthutha|

ನವದೆಹಲಿ: ಕಳೆದ ವರ್ಷ ಡಿಸೆಂಬರ್ ನಲ್ಲಿ ದೆಹಲಿಯಲ್ಲಿ ನಡೆದ ಹಿಂದೂ ಯುವ ವಾಹಿನಿಯ ಸಭೆಯಲ್ಲಿ ಬಲಪಂಥೀಯ ಪತ್ರಕರ್ತ ಸುರೇಶ್ ಚವ್ಹಾಂಕೆ ಅವರು ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡಿಲ್ಲ ಎಂಬ ದೆಹಲಿ ಪೊಲೀಸರ ನಿಲುವಿಗೆ ಸುಪ್ರೀಮ್ ಕೋರ್ಟ, ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

- Advertisement -

ಹರಿದ್ವಾರ ಮತ್ತು ದೆಹಲಿಯಲ್ಲಿ ಏರ್ಪಡಿಸಲಾಗಿದ್ದ ಧರ್ಮ ಸಂಸದ್ ಮತ್ತು ಹಿಂದೂ ವಾಹಿನಿ ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ವಿರೋಧಿ ದ್ವೇಷ ಭಾಷಣ ಮತ್ತು ನರಮೇಧಕ್ಕೆ ಕರೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಕುರ್ಬಾನ್ ಅಲಿ ಮತ್ತು ಹಿರಿಯ ವಕೀಲ ಅಂಜನಾ ಪ್ರಕಾಶ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ತೀವ್ರ ಅಸಮಾಧಾನ ಹೊರಹಾಕಿದೆ.

ಎರಡೂ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಲಾಗಿಲ್ಲ ಎಂದು ದೆಹಲಿ ಪೊಲೀಸರ ಪರವಾಗಿ ಉಪ ಆಯುಕ್ತರು ಸುಪ್ರೀಮ್ ಕೋರ್ಟ್ ಗೆ ಅಫಿದವತ್ ಸಲ್ಲಿಸಿದ್ದು, ಪೊಲೀಸರ ಈ ನಿಲುವಿಗೆ ನ್ಯಾಯಮೂರ್ತಿ ಖಾನ್ವಿಲ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಮೇ 4 ರೊಳಗೆ ಸರಿಯಾದ ಅಫಿದವಿತ್ ಸಲ್ಲಿಸಲು ASG ಗೆ ನ್ಯಾಯಾಲಯ ಎರಡು ವಾರಗಳ ಸಮಯಾವಕಾಶವನ್ನು ನೀಡಿದೆ.

ಈ ಮಧ್ಯೆ ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದ ಬಳಿಕ ಅದನ್ನು ಮರುಪರಿಶೀಲಿಸುವುದಾಗಿ ದೆಹಲಿ ಪೊಲೀಸರು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ನರಮೇಧಕ್ಕೆ ಕರೆ ನೀಡಿದ್ದನ್ನು ಸಮರ್ಥಿಸಲು ದೆಹಲಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

Join Whatsapp