ವಿವಾದಾತ್ಮಕ ತೀರ್ಪು; ಹೈಕೋರ್ಟ್ ನ್ಯಾಯಮೂರ್ತಿಯ ವಿರುದ್ಧ ಸುಪ್ರೀಂ ಕೋರ್ಟ್ ಕೊಲಿಜಿಯಂ ಕ್ರಮ | ಖಾಯಂ ಹುದ್ದೆ ಶಿಫಾರಸ್ಸು ರದ್ದು

Prasthutha|

ನವದೆಹಲಿ : ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಇತ್ತೀಚೆಗೆ ಎರಡು ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ್ಯಾಯಾಧೀಶೆಯೊಬ್ಬರ ಖಾಯಂ ಸ್ಥಾನಮಾನವನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಹಿಂಪಡೆದ ಅಪರೂಪದ ಸನ್ನಿವೇಶ ನಡೆದಿದೆ.

- Advertisement -

ಇಂತಹ ಪ್ರಕರಣಗಳಲ್ಲಿ ಇನ್ನೂ ಹೆಚ್ಚಿನ ಅನುಭವ ಅವರಿಗೆ ಬೇಕಾಗಿದೆ ಎಂಬ ನಿಲುವು ತಳೆದಿರುವ ಕೊಲಿಜಿಯಂ, ಈ ನಿರ್ಧಾರ ಕೈಗೊಂಡಿದೆ.

“ಆಕೆಯ ವಿರುದ್ಧ ವೈಯಕ್ತಿಕವಾದುದು ಏನೂ ಇಲ್ಲ. ಆಕೆ ಇನ್ನೂ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಾಗಿದೆ. ತಾನು ನ್ಯಾಯವಾದಿಯಾಗಿದ್ದಾಗ ಆಕೆ ಇಂತಹ ಪ್ರಕರಣಗಳಲ್ಲಿ ಹೆಚ್ಚು ವ್ಯವಹರಿಸಿದ್ದಂತಿಲ್ಲ. ಆಕೆ ತೊಡಗಿಸಿಕೊಳ್ಳಬೇಕಾಗಿದೆ ಮತ್ತು ಆಕೆಗೆ ತರಬೇತಿ ಬೇಕಾಗಿದೆ” ಎಂದು ಸುಪ್ರೀಂ ಕೋರ್ಟ್ ಮೂಲಗಳು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.

- Advertisement -

ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಲು ಅಥವಾ ನೇಮಕಗೊಳಿಸುವುದಕ್ಕೆ ಅನುಮತಿ ಪಡೆಯಲು ಕೊಲಿಜಿಯಂ ತನ್ನ ಶಿಫಾರಸ್ಸುಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಬೇಕು. ಕೆಲವೊಮ್ಮೆ ಈ ಶಿಫಾರಸ್ಸುಗಳನ್ನು ಕೇಂದ್ರ ಸರಕಾರ ನಿರಾಕರಿಸಬಹುದಾಗಿದೆ.

ಬಾಂಬೆ ಹೈಕೋರ್ಟ್ ನ ನಾಗ್ಪುರ ನ್ಯಾಯಪೀಠಕ್ಕೆ ಖಾಯಂ ನ್ಯಾಯಮೂರ್ತಿಯಾಗಿ ನ್ಯಾ. ಪುಷ್ಪಾ ಗನೆದಿವಾಲಾರ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಜ.20ರಂದು ಶಿಫಾರಸು ಮಾಡಿತ್ತು. ನ್ಯಾ. ಪುಷ್ಪಾ ಅವರು ಇತ್ತೀಚೆಗೆ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿ ನೀಡಿದ್ದ ತೀರ್ಪುಗಳು ವಿವಾದಾತ್ಮಕವಾಗಿದೆ. ಈ ತೀರ್ಪುಗಳಿಗೆ ಸುಪ್ರೀಂ ಕೋರ್ಟ್ ಈಗಾಗಲೇ ತಡೆ ನೀಡಿದೆ.



Join Whatsapp